ಬಳ್ಳಾರಿ:ಕೌಲ್ ಬಜಾರ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮಹಮ್ಮದೀಯ ಕಾಲೇಜು ರಸ್ತೆಯಲ್ಲಿ ನಡೆದ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಯಾವುದೇ ಮಾರಕಾಸ್ತ್ರ ಬಳಕೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಸ್ಪಷ್ಟಪಡಿಸಿದ್ದಾರೆ.
ಗುಂಪು ಘರ್ಷಣೆಯಲ್ಲಿ ಮಾರಕಾಸ್ತ್ರ ಬಳಕೆಯಾಗಿಲ್ಲ, ಅದೊಂದು ಕೌಟುಂಬಿಕ ಕಲಹ ಅಷ್ಟೇ: ಎಸ್ಪಿ ಸ್ಪಷ್ಟನೆ
ಬಳ್ಳಾರಿ ಮಹಮ್ಮದೀಯ ಕಾಲೇಜು ರಸ್ತೆಯಲ್ಲಿ ನಡೆದಿರುವ ಎರಡು ಗುಂಪುಗಳ ನಡುವಿನ ಘರ್ಷಣೆ ಒಂದು ಕೌಟುಂಬಿಕ ಕಲಹವಷ್ಟೇ. ಎರಡು ಗುಂಪಿನವರೂ ಕೂಡ ಸಂಬಂಧಿಕರಾಗಿದ್ದಾರೆ. ಕೇವಲ ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆಯೇ ವಿನಾ ಯಾವುದೇ ಮಾರಕಾಸ್ತ್ರ ಬಳಕೆ ಮಾಡಿಲ್ಲ ಎಂದು ಎಸ್ಪಿ ಸೈದುಲು ತಿಳಿಸಿದ್ದಾರೆ.
ಗುಂಪು ಘರ್ಷಣೆಯಲ್ಲಿ ಮಾರಕಾಸ್ತ್ರಗಳ ಬಳಕೆಯಾಗಿಲ್ಲ... ಅದೊಂದು ಕೌಟುಂಬಿಕ ಕಲಹ ಅಷ್ಟೇ: ಎಸ್ಪಿ ಸೈದುಲು ಸ್ಪಷ್ಟನೆ
ಬಳ್ಳಾರಿಯ ಎಸ್ಪಿ ಕಚೇರಿಯಲ್ಲಿಂದು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಅದೊಂದು ಕೌಟುಂಬಿಕ ಕಲಹವಷ್ಟೇ. ಎರಡು ಗುಂಪಿನವರೂ ಕೂಡ ಸಂಬಂಧಿಕರಾಗಿದ್ದಾರೆ. ಕೇವಲ ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆಯೇ ವಿನಾ ಯಾವುದೇ ಮಾರಕಾಸ್ತ್ರ ಬಳಕೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಗುಂಪು ಘರ್ಷಣೆಯಲ್ಲಿ ಭಾಗಿಯಾಗಿದ್ದ ಎರಡೂ ಕಡೆಯವರ ಮೇಲೆ ದೂರು ದಾಖಲಿಸಲಾಗಿದೆ. ಈಗಾಗಲೇ ನಾವು ಅವರನ್ನು ಬಂಧಿಸಿದ್ದೇವೆ. ಉಳಿದವರನ್ನೂ ಶೀಘ್ರವೇ ಬಂಧಿಸಲಾಗುವುದು ಎಂದು ಎಸ್ಪಿ ಸೈದುಲು ಹೇಳಿದರು.