ಹೊಸಪೇಟೆ: ನೌಕರರ ಮುಷ್ಕರ ಹತ್ತಿಕ್ಕಲು ಮುಂದಾಗಿರುವ ಸಾರಿಗೆ ಇಲಾಖೆ ಸದ್ಯ ವರ್ಗಾವಣೆ ತಂತ್ರ ಹೆಣೆಯುತ್ತಿದ್ದು, ಎನ್ಈಕೆಎಸ್ಆರ್ಟಿಸಿ ಹೊಸಪೇಟೆ ವಿಭಾಗದಲ್ಲಿ 8 ಜನ ನೌಕರರನ್ನು ವರ್ಗಾವಣೆ ಮಾಡಿದೆ.
ಸಾರಿಗೆ ಮುಷ್ಕರ: ಹೊಸಪೇಟೆ ವಿಭಾಗದ 8 ನೌಕರರ ವರ್ಗಾವಣೆ - ಹೊಸಪೇಟೆ ಎನ್ಈಕೆಎಸ್ಆರ್ಟಿಸಿ ನೌಕರರ ವರ್ಗಾವಣೆ
ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿ ವಿರುದ್ಧ ವರ್ಗಾವಣೆ ಅಸ್ತ್ರವನ್ನು ಸಾರಿಗೆ ಸಂಸ್ಥೆಯು ಪ್ರಯೋಗ ಮಾಡುತ್ತಿದೆ. ಈಗಾಗಲೇ ಇಬ್ಬರು ನೌಕರರ ವಜಾ ಹಾಗೂ ಮೂವರು ನೌಕರರನ್ನು ಅಮಾನತು ಮಾಡಲಾಗಿದೆ. ಅಲ್ಲದೇ, ಎಲ್ಲ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನೋಟಿಸ್ ನೀಡಿದೆ.
ಎಂಟು ಜನರನ್ನು ಅಂತರ್ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದ್ದು, ಈ ಕುರಿತು ಈಟಿವಿ ಭಾರತ್ಗೆ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಖಚಿತಪಡಿಸಿದ್ದಾರೆ.