ಕರ್ನಾಟಕ

karnataka

ETV Bharat / state

ಕೆಂಪಣ್ಣ ಮಾಡಿರುವ 40 ಪರ್ಸೆಂಟ್​ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ: ಉಗ್ರಪ್ಪ - allegations made by Kempanna

ಕೆಂಪಣ್ಣ ಮಾಡಿರುವ 40 ಪರ್ಸೆಂಟ್​ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡಬೇಕು ಎಂದು ಉಗ್ರಪ್ಪ ಆಗ್ರಹ ಮಾಡಿದ್ದಾರೆ.

ಕೆಂಪಣ್ಣ ಮಾಡಿರುವ 40 ಪರ್ಸೆಂಟ್​ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡಬೇಕು
ಕೆಂಪಣ್ಣ ಮಾಡಿರುವ 40 ಪರ್ಸೆಂಟ್​ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡಬೇಕು

By

Published : Aug 26, 2022, 9:46 PM IST

ಬಳ್ಳಾರಿ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ 40 ಪರ್ಸೆಂಟ್​ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡಬೇಕು, ಆ ರೀತಿಯ ತನಿಖೆಯಾದರೆ ಬಹುತೇಕ ಸಚಿವರು ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಬಾಂಬ್​ ಸಿಡಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.

ನ್ಯಾಯಾಂಗ ತನಿಖೆಗೆ ಆದೇಶ ಮಾಡಿದರೆ ನಮ್ಮಲ್ಲಿರುವ ದಾಖಲೆ ಕೊಡುತ್ತೇವೆ.ಆದರೆ, ವ್ಯವಸ್ಥಿತ ಸಂಚು ರಾಜ್ಯದಲ್ಲಿ ನಡೆಯುತ್ತಿದೆ. ಇಂತಹ ವಿಚಾರಗಳ ಬಗ್ಗೆ ಮಾತಾಡಿದರೆ, ಮಾಂಸ ತಿಂದು ದೇವಸ್ಥಾನಕ್ಕೆ ಹೋದರು ಅದೂ ಇದೂ ಅಂತ ದಾರಿ ತಪ್ಪಿಸುತ್ತಾರೆ ಎಂದು ಹೇಳಿದರು.

ಮಾಂಸ ತಿನ್ನಬಾರದು, ದೇವಸ್ಥಾನಕ್ಕೆ ಹೊಗಬಾರದು ಅಂತಾ ಎಲ್ಲಿ ಇದೆ? ಎಂದು ಪ್ರಶ್ನಿಸಿದ ಉಗ್ರಪ್ಪ, ಬಿಜೆಪಿಯವರು ಅಧುನಿಕ ರಾಮ ಭಕ್ತರು, ಭಾರಧ್ವಜರ ಆಶ್ರಮಕ್ಕೆ ರಾಮ ಹೋದಾಗ ರಾಮನಿಗೆ ಭಾರಧ್ವಜರು ಮಾಂಸಹಾರ ವ್ಯವಸ್ಥೆ ಮಾಡ್ತೀನಿ ಎಂದಿದ್ದರು, ಸೀತಾ ಮಾತೆ ಗಂಗಾ ನದಿ ದಾಟಬೇಕಾದರೆ, ತಾಯಿ ನೀನು ಜಗನ್ಮಾತೆ, ರಕ್ಷಣೆ ಕೊಡು, ನಾನು ವಾಪಸ್ ಬಂದ ಮೇಲೆ ನಿನಗೆ ತೃಪ್ತಿಯಾಗುವಷ್ಟು ಮಾಂಸದ ನೈವೇದ್ಯ, ಹೆಂಡದ ನೈವೇದ್ಯ ಕೊಡುತ್ತೇವೆ ಎಂದಿದ್ದರು ಎಂದು ಪೌರಾಣಿಕ ಪ್ರಸಂಗಗಳನ್ನು ಉಲ್ಲೇಖಿಸಿದರು.

ಕೆಂಪಣ್ಣ ಮಾಡಿರುವ 40 ಪರ್ಸೆಂಟ್​ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡಬೇಕು

ಬಿಜೆಪಿ ಹಾಗೂ ಆರ್ ಎಸ್‍ಎಸ್‍ನವರಿಗೆ ತಾಕತ್ತಿದ್ದರೆ, ಧಮ್ ಇದ್ದರೆ ಮಾಂಸ ತಿನ್ನುವವರು, ಮೊಟ್ಟೆ ತಿನ್ನುವವರು, ಮೀನು ತಿನ್ನುವವರು ಶಾಖೆಗೆ ಬರಬಾರದು ಎಂದು ಹೇಳಲಿ. ಅವರ ಮತ ಬೇಕಾಗಿಲ್ಲ ಅಂತಾ ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಸಪೇಟೆಯಲ್ಲಿ ಯಾವ ಟೆಂಡರ್ ಇಲ್ಲದೇ ಕಾಮಗಾರಿ ನಡೆಯುತ್ತಿತ್ತು, ಅದೇ ರೀತಿ ಸರ್ಕಾರದಲ್ಲಿ ಟೆಂಡರ್ ಇಲ್ಲದೇ ಸಾಕಷ್ಟು ಕಾಮಗಾರಿಗಳು ನಡೆದಿವೆ. ಬಳ್ಳಾರಿಯ ಟವರ್ ಕ್ಲಾಕ್ ಸುಸ್ಥಿತಿಯಲ್ಲಿತ್ತು, ಅದರ ಬಗ್ಗೆ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಬೇಕಿತ್ತು, ಏಕಾಏಕಿ ಸುಸ್ಥಿತಿಯಲ್ಲಿದ್ದ ಕಟ್ಟಡ ಕೆಡವಿದ್ದು ತಪ್ಪು, ಕಟ್ಟಡ ಶಿಥಿಲಗೊಂಡಿದ್ದರೆ ತೆರವು ಮಾಡಬೇಕಿತ್ತು, ಮನಸೋ ಇಚ್ಛೆ ಕೆಲಸ ಮಾಡುವುದು ಸರಿಯಲ್ಲ ಎಂದು ಹರಿಹಾಯ್ದರು.

ಬೆಂಗಳೂರಿನಲ್ಲಿ ಸರ್ಕಾರಿ ಕಾಮಗಾರಿಗಳಲ್ಲಿ, ಕಡತ ವಿಲೇವಾರಿಗೆ ಶೇ.40 ಕಮಿಷನ್ ಕೇಳಲಾಗುತ್ತಿದೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘ ಆರೋಪ ಮಾಡಿದೆ. ಕೆಂಪಣ್ಣ ಅವರ ಅಧ್ಯಕ್ಷತೆಯಲ್ಲಿರುವ ಸಂಘ 1948ರಲ್ಲಿ ಸ್ಥಾಪನೆಯಾದ ಅತ್ಯಂತ ಹಳೆಯ ಸಂಘ, 2 ಲಕ್ಷ ಜನ ಗುತ್ತಿಗೆದಾರರು ಸದಸ್ಯರಾಗಿದ್ದಾರೆ. ಇಂತಹ ಸಂಘದವರು ನ ಖಾವೂಂಗಾ, ನಾ ಖಾನೆ ದೂಂಗಾ ಎಂದು ಹೇಳಿದ ಪ್ರಧಾನಿಗಳಿಗೆ ಪತ್ರ ಬರೆದರು ಎಂದು ಹೇಳಿದ ಉಗ್ರಪ್ಪ, ಕೇವಲ ಪ್ರಧಾನಿ ಮಾತ್ರವಲ್ಲದೇ, ಅಮಿತ್ ಶಾ ಹಾಗೂ ರಾಜ್ಯಪಾಲರಿಗೂ ಪತ್ರ ಬರೆದಿದ್ದಾರೆ. ಆದರೆ, ಈವರೆಗೆ ಯಾವ ಕ್ರಮವೂ ಆಗಲಿಲ್ಲ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಕುಮ್ಮಕ್ಕಿನಿಂದ ಕೆಂಪಣ್ಣ ಅವರಿಂದ ಕಮಿಷನ್ ಆರೋಪ: ಕಾರಜೋಳ

ABOUT THE AUTHOR

...view details