ಕರ್ನಾಟಕ

karnataka

By

Published : Feb 11, 2020, 11:36 AM IST

ETV Bharat / state

ಮದುವೆ ಸಮಾರಂಭದಲ್ಲಿ "ಮೈಸೂರು ಮಲ್ಲಿಗೆ ನಾಟಕ'' ಪ್ರದರ್ಶನ: ಹೀಗೊಂದು ವಿಶೇಷ ವಿವಾಹ

ಬಳ್ಳಾರಿಯಲ್ಲಿ ಮದುವೆ ನಿಮಿತ್ತ ಮದುಮಗ ಕಲ್ಯಾಣ ಮಂಟಪದಲ್ಲಿ ''ಮೈಸೂರು ಮಲ್ಲಿಗೆ'' ನಾಟಕದ ಪ್ರದರ್ಶನ ಆಯೋಜಿಸಿದ್ದಾರೆ.

mysore mallige drama organised in marriage function
ವಿಶೇಷ ರೀತಿ ಮದುವೆ

ಬಳ್ಳಾರಿ: ಫೆಬ್ರವರಿ 13 ಮತ್ತು 14 ರಂದು ಮದುವೆ ಪ್ರಯುಕ್ತ ನವ ವಧು - ವರರು "ಮೈಸೂರು ಮಲ್ಲಿಗೆ" ನಾಟಕ ಪ್ರದರ್ಶ‌ನ ಆಯೋಜಿಸಿದ್ದಾರೆ.

ಇದೇ ಫೆಬ್ರವರಿ 13 ಮತ್ತು 14 ರಂದು ನಗರದ ಖಾಸಗಿ ಬ್ಯಾಂಕ್ ಉದ್ಯೋಗಿ ಮತ್ತು ರಂಗತೋರಣದ ಸಹ ಕಾರ್ಯದರ್ಶಿ ಆಗಿರುವ ಮದುಮಗ ಅಡವಿಸ್ವಾಮಿ- ಲಿಂಗಸುಗೂರಿನ ಅಕ್ಷತಾ ಅವರ ವಿವಾಹ ನಗರದ ಬಸವ ಭವನದಲ್ಲಿ ನಡೆಯುತ್ತಿದೆ‌. ರಂಗತೋರಣದಲ್ಲಿ‌ ಕಳೆದ 10 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸಿರುವ ಅಡವಿಸ್ವಾಮಿ, ಎಲ್ಲರ ಸಲಹೆಯಂತೆ ತಮ್ಮ ಮದುವೆ ದಿನದಂದು ಜನಪ್ರಿಯ "ಮೈಸೂರು ಮಲ್ಲಿಗೆ" ನಾಟಕ ಆಯೋಜಿಸಿರುವುದಾಗಿ ತಿಳಿಸಿದರು.

ವಿಶೇಷ ರೀತಿ ಮದುವೆ

ವಿಶೇಷವಾಗಿ ಫೆ. 13ನೇ ಸಂಜೆ 6 ಗಂಟೆ 30 ನಿಮಿಷಕ್ಕೆ "ಮೈಸೂರು ಮಲ್ಲಿಗೆ" ನಾಟಕ ಆರಂಭವಾಗಲಿದೆ. ಫೆಬ್ರವರಿ 14ನೇ ರಂದು ವಿವಾಹ ನಡೆಯಲಿ ವಿವಾಹದ ನಂತರ ಬಂದ ಕುಟುಂಬಗಳಿಗೆ 500 ಮಲ್ಲಿಗೆ ಸಸಿಗಳು ಮತ್ತು ಪುಸ್ತಕಗಳನ್ನು ಕೊಡುತ್ತೇವೆ. "ಮಂಗಳ ದಿನ" ಎನ್ನುವ ಕಾರ್ಯಕ್ರಮದಲ್ಲಿ ಮಾಂಗಲ್ಯ ಸೂತ್ರ, ಧಾರಣೆ, ಮದುವೆ ಬಗ್ಗೆ ವಿಶೇಷ ಉಪನ್ಯಾಸವು ಅರ್ಧ ತಾಸು ಇರುತ್ತದೆ. ನಾಟಕ ನೋಡಲು ಬನ್ನಿ ಮತ್ತು ತಮ್ಮನ್ನು ಆಶೀರ್ವದಿಸಿ ಎಂದು ವರ ಅಡವಿಸ್ವಾಮಿ ಆಹ್ವಾನಿಸಿದರು.

ABOUT THE AUTHOR

...view details