ವಿಜಯನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಒಟ್ಟಿಗೆ ಬರೆದ ತಾಯಿ - ಮಗಳು ಉತ್ತೀರ್ಣರಾಗಿದ್ದಾರೆ. ವಿಜಯನಗರದ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ನಿವಾಸಿ, ಚಿಲುಗೋಡಿ ಹೈಸ್ಕೂಲ್ ಶಿಕ್ಷಕ ಬಿ.ರಾಮಜ್ಜರ ಪತ್ನಿ ಸವಿತಾ (37) ಹಾಗೂ ಮಗಳು ಚೇತನಾ ಇಬ್ಬರೂ ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ತೇರ್ಗಡೆಯಾದ ತಾಯಿ - ಮಗಳು.
ಸವಿತಾ 2002-03ರ ಎಸ್ಎಸ್ಎಲ್‌ಸಿ ವಿದ್ಯಾರ್ಥಿಯಾಗಿದ್ದರು. ವೈವಾಹಿಕ ಕಾರಣದಿಂದ ಎಸ್ಎಸ್ಎಲ್‌ಸಿ ಪೂರ್ಣಗೊಳಿಸಲಾಗದ ಅವರು ತಮ್ಮ ಮಗಳೊಂದಿಗೆ ತಾವೂ ಸಹ ಪರೀಕ್ಷೆ ಬರೆಯಬೇಕು ಎಂಬ ಹಂಬಲಕ್ಕೆ ಬಿದ್ದಿದ್ದರು. ಇದಕ್ಕೆ ಪತಿ ಹಾಗೂ ಮಗಳು ಸಹ ಸಾಥ್ ನೀಡಿದ್ದರು.