ಬಳ್ಳಾರಿ : ಜಿಲ್ಲೆಯ ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರ ಮೈತುಂಬಾ ಗಾಯಗಳಾಗಿವೆ.
ಕಂಡಕಂಡಲ್ಲಿ ಪರಚುವ ಕೋತಿಗಳಿಂದ ಹೈರಾಣಾದ ಗಣಿನಾಡ ಜನ.. ಗ್ರಾಮಸ್ಥರ ಮೈ ತುಂಬ ಗಾಯ - ballary monkeys problem news
ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರ ಮೈತುಂಬಾ ಗಾಯಗಳಾಗಿವೆ.
ಕೋತಿಗಳ ಹಾವಳಿಗೆ ಬೆಚ್ಚಿಬಿದ್ದ ಜನರು : ವಡ್ಡು, ಕುರೆಕುಪ್ಪ ಗ್ರಾಮದ ಜನರ ಮೈತುಂಬಾ ಗಾಯ
ಗ್ರಾಮದಲ್ಲಿ ಕಂಡ, ಕಂಡವರಿಗೆ ಈ ಕೋತಿಗಳು ಕಚ್ಚಿ, ಜನರ ತಲೆ, ಕೈ, ಕಾಲುಗಳಲ್ಲಿ ಗಾಯಗಳಾಗಿವೆ. ತಮ್ಮ ದಿನನಿತ್ಯದ ಕೆಲಸಕ್ಕೆ ಹೋಗೋದನ್ನ ಬಿಟ್ಟು ಬಡಿಗೆ ಹಿಡಿದು ಬರೀ ಕೋತಿ ಓಡಿಸೋದೇ ಕೆಲಸವಾಗಿದೆ ಎಂದು ಈಟಿವಿ ಭಾರತ ಸಂಸ್ಥೆ ವರದಿಗಾರರೊಂದಿಗೆ ದೂರವಾಣಿ ಮೂಲಕ ತಿಳಿಸಿದರು.
ಈ ಕೋತಿಗಳ ಹಾವಳಿಯಿಂದ ರೋಸಿ ಹೋಗಿರೋ ವಡ್ಡು, ಕುರೆಕುಪ್ಪ ಗ್ರಾಮದ ಜನರು ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.