ಬಳ್ಳಾರಿ:ನಗರದಲ್ಲಿ ವ್ಯಕ್ತಿವೋರ್ವನ ಗಮನ ಬೇರೆಡೆ ಸೆಳೆದು ಖದೀಮರು ಬರೋಬ್ಬರಿ 3 ಲಕ್ಷದ 20 ಸಾವಿರ ರೂಪಾಯಿ ನಗದನ್ನು ಕದ್ದೊಯ್ದಿದ್ದಾರೆ. ಕಳ್ಳರ ಈ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಳ್ಳಾರಿಯಲ್ಲಿ ಬ್ಯಾಂಕ್ ಗ್ರಾಹಕನ ಲಕ್ಷಗಟ್ಟಲೆ ಹಣ ಕದ್ದೊಯ್ದ ಖದೀಮರು: ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ
ಬಳ್ಳಾರಿಯಲ್ಲಿ ವ್ಯಕ್ತಿಯ ಗಮನ ಬೇರೆಡೆ ಸೆಳೆದು 3 ಲಕ್ಷದ 20 ಸಾವಿರ ಹಣ ಕಳ್ಳತನ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದ್ದು, ಈ ಕೃತ್ಯದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿನ ಖಾಸಗಿ ಬ್ಯಾಂಕ್ನಿಂದ ಗ್ರಾಹಕನೋರ್ವ ತನ್ನ ಖಾತೆಯಿಂದ ಫೆಬ್ರವರಿ 2 ರಂದು ಮಧ್ಯಾಹ್ನ 12.30ರ ಸಮಯದಲ್ಲಿ 3 ಲಕ್ಷದ 20 ಸಾವಿರ ರೂಪಾಯಿ ಹಣವನ್ನು ಬಿಡಿಸಿಕೊಂಡು ಬಂದು ತನ್ನ ಬೈಕ್ ಮೇಲಿನ ಟ್ಯಾಂಕರ್ ಕವರ್ನಲ್ಲಿ ಇಟ್ಟಿದ್ದರು. ಇದನ್ನು ಗಮನಿಸಿದ ಇಬ್ಬರು ಖದೀಮರು ಆ ಹಣವನ್ನು ಕದ್ದು ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಬ್ಯಾಂಕ್ ಗ್ರಾಹಕನ ಗಮನವನ್ನು ಬೇರೆಡೆ ಸೆಳೆದು ಲಕ್ಷ ಲಕ್ಷ ಹಣವನ್ನು ಕಳ್ಳತನ ಮಾಡಿ ಪರಾರಿಯಾದವರು ಯಾರು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಬ್ರೂಸ್ ಪೇಟೆ ಠಾಣೆಯ ಸಿಪಿಐ ನಾಗರಾಜ್ ಅವರು ದೂರವಾಣಿ ಮೂಲಕ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ.