ಕರ್ನಾಟಕ

karnataka

ETV Bharat / state

ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರಿಂದ ಖಾಸಗಿ ಆಸ್ಪತ್ರೆಗಳಿಂದ ಹಣ ಸುಲಿಗೆ! - Private hospitals in Bellary

ಉಪಕಾಲುವೆ‌ ನೀರನ್ನು ನೇರವಾಗಿ ಸೇವನೆ ಮಾಡಿದ್ದರಿಂದ 79ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದಾರೆ. ವಾಂತಿ- ಬೇಧಿ ಪ್ರಕರಣವನ್ನು ಖಾಸಗಿ ಆಸ್ಪತ್ರೆಗಳು ಬಂಡವಾಳ ಮಾಡಿಕೊಂಡು ಅಂದಾಜು 16 - 20 ಸಾವಿರ ರೂ. ಹಣ ಸ್ವೀಕರಿಸುತ್ತಿದ್ದಾರೆ..

sddsd
ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಹಣ ಸುಲಿಗೆ!

By

Published : Jan 29, 2021, 7:58 PM IST

ಬಳ್ಳಾರಿ: ತಾಲೂಕಿನ ಸಂಜೀವರಾಯನಕೋಟೆ ಗ್ರಾಮದಲ್ಲಿ ಕಲುಷಿತ ನೀರು ಸೇವೆಸಿ ಅಸ್ವಸ್ಥಗೊಂಡ ರೋಗಿಗಳಿಂದ ನಗರದ ಖಾಸಗಿ ಆಸ್ಪತ್ರೆಗಳು ಭಾರೀ ಮೊತ್ತದ ಹಣವನ್ನ ಪೀಕುತ್ತಿರುವ ಆರೋಪ ಕೇಳಿ ಬಂದಿದೆ.

ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಹಣ ಸುಲಿಗೆ!

ವಿಮ್ಸ್ ಆಸ್ಪತ್ರೆಗೆ ಈ ಅಸ್ವಸ್ಥಗೊಂಡಿದ್ದ ರೋಗಿಗಳನ್ನ ಮಿಂಚೇರಿ ಹಾಗೂ ಸಂಜೀವರಾಯನ ಕೋಟೆ ಗ್ರಾಮದ ಆರ್​ಎಂಪಿ ವೈದ್ಯರು ಕರೆದೊಯ್ದದಂತೆ ನಾಟಕವಾಡಿ, ಬಳಿಕ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಅಸ್ವಸ್ಥಗೊಂಡ ರೋಗಿಗಳಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳ ವೈದ್ಯರು ಮನಸೋ ಇಚ್ಛೆ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿವೆ.

ಸಂಜೀವರಾಯನಕೋಟೆ ಗ್ರಾಮದ ಮೂಲಕ ಹಾದುಹೋಗುವ ಉಪಕಾಲುವೆ‌ ನೀರನ್ನು ನೇರವಾಗಿ ಸೇವನೆ ಮಾಡಿದ್ದರಿಂದ 79ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದಾರೆ. ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಶ್ರೀಕಾಂತ್, ವಾಂತಿ- ಬೇಧಿ ಪ್ರಕರಣವನ್ನು ಖಾಸಗಿ ಆಸ್ಪತ್ರೆಗಳು ಬಂಡವಾಳ ಮಾಡಿಕೊಂಡು ಅಂದಾಜು 16 - 20 ಸಾವಿರ ರೂ. ಹಣ ಸ್ವೀಕರಿಸುತ್ತಿದ್ದಾರೆ ಎಂದು ದೂರಿದ್ದಾರೆ.

ABOUT THE AUTHOR

...view details