ಕರ್ನಾಟಕ

karnataka

ETV Bharat / state

ಗಣಿನಾಡಿನಲ್ಲಿ ಮೇಳೈಸಿದ ಮೊಹರಂ ಹಬ್ಬದ ಸಂಭ್ರಮ - Moharam

ಬಳ್ಳಾರಿ ಜಿಲ್ಲೆಯಾದ್ಯಂತ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬದ ಸಂಭ್ರಮವು ಮೇಳೈಸಿತ್ತು. ಮುಲ್ಲಾಗಳಿಗೆ ಬೆಲ್ಲ, ಸಕ್ಕರೆಯ ತುಲಾಭಾರ ಮಾಡುವ ಮೂಲಕ ಪ್ರೀತಿ, ಅಕ್ಕರೆಗೆ ಪಾತ್ರರಾಗಿದ್ದಾರೆ ಗ್ರಾಮಸ್ಥರು.

ಮೊಹರಂ ಹಬ್ಬದ ಸಂಭ್ರಮ

By

Published : Sep 11, 2019, 9:58 AM IST

ಬಳ್ಳಾರಿ:ಜಿಲ್ಲೆಯಾದ್ಯಂತ ಹಿಂದೂ-ಮುಸ್ಲಿಂ ಧರ್ಮಿಯರ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬದ ಸಂಭ್ರಮವು ಕಳೆಗಟ್ಟಿತ್ತು. ತಾಲೂಕಿನ ಗಡಿಯಂಚಿನಲ್ಲಿರುವ ಜಾಲಿಹಾಳು ಗ್ರಾಮದಲ್ಲಿ ಬೆಲ್ಲ, ಸಕ್ಕರೆಯನ್ನು ಮುಸ್ಲಿಂ ಧರ್ಮದ ಮುಲ್ಲಾರಿಗೆ ಕ್ವಿಂಟಾಲ್​ಗಟ್ಟಲೇ ಸಮರ್ಪಿಸಿ ಹಿಂದೂಗಳು ಭಕ್ತಿ ಮೆರೆದಿದ್ದಾರೆ.

ಗಣಿನಾಡಿನಲ್ಲಿ ಮೇಳೈಸಿದ ಮೊಹರಂ ಹಬ್ಬದ ಸಂಭ್ರಮ

ಆಯಾ ಗ್ರಾಮಗಳ ಮಸೀದಿಗಳ ಎದುರು ದೊಡ್ಡದಾದ ಅಲಾಯಿ ಕುಣಿಯನ್ನು ತೋಡಿ ಗೋಪುರಾಕಾರದ ಕಟ್ಟಿಗೆಯನ್ನು ಜೋಡಿಸಿ ಬೆಂಕಿಯನ್ನು ಹೊತ್ತಿಸಲಾಗಿತ್ತು. ಅದು ಸುಟ್ಟು ಕೆಂಡವಾದ ಮೇಲೆ ಭಕ್ತರು ಆ ಅಗ್ನಿಯನ್ನು ತುಳಿಯೋದು ಇಲ್ಲಿನ‌ ಭಕ್ತರ ಪದ್ಧತಿಯಾಗಿದೆ. ಅದರಂತೆಯೇ ಬೆಳಗಿನಜಾವ ಮೂರು ಗಂಟೆ ಸುಮಾರಿಗೆ ಪೀರಲ ದೇವರು ಮೇಲೆದ್ದು, ಮನೆ ಮನೆಗೆ ತೆರಳುವ ಈ ದೇವರುಗಳಿಗೆ ಪಾದಪೂಜೆ ಹಾಗೂ ಬೆಲ್ಲ, ಸಕ್ಕರೆ ಮತ್ತು ತೆಂಗಿನಕಾಯಿ ಸಮರ್ಪಿಸಿ ಭಕ್ತಿಯನ್ನು ಮೆರೆಯುತ್ತಾರೆ.

ಈ ಹನ್ನೆರಡು ಅಡಿ ಎತ್ತರದ ಪೀರಲ ದೇವರು ವಿಶೇಷ ಗಮನ ಸೆಳೆದವು. ಅಂದಾಜು 6 ಪ್ರಮುಖ ಪೀರಲ ದೇವರುಗಳು ಹನ್ನೆರಡು ಅಡಿಯಷ್ಟು ದೊಡ್ಡದಾಗಿವೆ. ಉಳಿದ ನಾಲ್ಕು ಸಣ್ಣದಾದ ಪೀರಲ ದೇವರು ಸೇರಿದಂತೆ ಒಟ್ಟಾರೆಯಾಗಿ ಹತ್ತು ಪೀರಲ ದೇವರುಗಳನ್ನು ಈ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿತ್ತು.

ದೆವ್ವ, ಭೂತ ಬಿಡಿಸುವ ಹಬ್ಬ: ಬುಧವಾರ ಮಧ್ಯಾಹ್ನದ ಹೊತ್ತಿಗೆ ಪೀರಲ ದೇವರು ದಪ್ಪಗಾದ ಮೇಲೆ ಸಂಜೆಯೊತ್ತಿಗೆ ದೆವ್ವ, ಭೂತ ಹಾಗೂ ಗಾಳಿ ಬಿಡಿಸುವ ಹಬ್ಬವನ್ನು ಆಚರಿಸೋದು ಜಾಲಿಹಾಳು ಗ್ರಾಮದಲ್ಲಿ ವಾಡಿಕೆಯಾಗಿದೆಯೆಂದು ಮುಖಂಡ ದಿವಾಕರಗೌಡ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಬೆಲ್ಲ, ಸಕ್ಕರೆಯ ತುಲಾಭಾರ:ಪ್ರತಿವರ್ಷದಂತೆ ಈ ವರ್ಷವೂ ಹೊನ್ನೂರುಸ್ವಾಮಿ ದರ್ಗಾದ ಮುಲ್ಲಾಗಳಿಗೆ ತಮ್ಮ ಮನೆಯಲ್ಲಿನ ಸುಖ-ದುಃಖ ನಿವಾರಣೆಗೋಸ್ಕರ ಕ್ವಿಂಟಾಲ್​ಗಟ್ಟಲೇ ಬೆಲ್ಲ, ಸಕ್ಕರೆಯ ತುಲಾಭಾರ ಮಾಡಲಾಗುತ್ತದೆ.‌ ಈ ಮೂಲಕ ಅನ್ಯಧರ್ಮಿಯರ ಪ್ರೀತಿ, ಅಕ್ಕರೆಗೆ ಗ್ರಾಮಸ್ಥರು ಪಾತ್ರರಾಗುತ್ತಾರೆ.

ABOUT THE AUTHOR

...view details