ಕರ್ನಾಟಕ

karnataka

ETV Bharat / state

ಅಸಂಘಟಿತ ಕಾರ್ಮಿಕರಿಗಾಗಿ ಪಿಂಚಣಿ ಯೋಜನೆ : ಜಿ.ಸೋಮಶೇಖರ ರೆಡ್ಡಿ - ಶಾಸಕ ಜಿ.ಸೋಮಶೇಖರ ರೆಡ್ಡಿ

ಅಸಂಘಟಿತ ಕಾರ್ಮಿಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಪಿಂಚಣಿ ಯೋಜನೆ ಜಾರಿಗೆ ತಂದಿದ್ದಾರೆ. ಅದನ್ನು ಕಾರ್ಮಿಕರು ಬಳಸಿಕೊಳ್ಳಬೇಕು ಎಂದು ಬಳ್ಳಾರಿ ನಗರದ ಶಾಸಕ ಜಿ.ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.

g-somashekhar-reddy
ಜಿ.ಸೋಮಶೇಖರ ರೆಡ್ಡಿ

By

Published : Jan 15, 2020, 11:10 AM IST

ಬಳ್ಳಾರಿ: ಅಸಂಘಟಿತ ಕಾರ್ಮಿಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಪಿಂಚಣಿ ಯೋಜನೆ ಜಾರಿಗೆ ತಂದಿದ್ದಾರೆ. ಅದನ್ನು ಕಾರ್ಮಿಕರು ಬಳಸಿಕೊಳ್ಳಬೇಕು ಎಂದು ನಗರದ ಶಾಸಕ ಜಿ.ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.

ನಗರದ ಜೋಳದರಾಶಿ ದೊಡ್ಡನಗೌಡರ ರಂಗಮಂದಿರದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ನೇತೃತ್ವದಲ್ಲಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರ 848ನೇ ಜಯಂತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಶಾಸಕ ಜಿ.ಸೋಮಶೇಖರ ರೆಡ್ಡಿ ದೀಪ ಬೆಳಗುವ ಮೂಲಕ‌ ಚಾಲನೆ ನೀಡಿದರು.

ಜಿ.ಸೋಮಶೇಖರ ರೆಡ್ಡಿ

ನಂತರ ಮಾತನಾಡಿದ ಅವರು, ನಗರದಲ್ಲಿ ಭೋವಿ ಭವನವನ್ನು ನಿರ್ಮಾಣ ಮಾಡಿಕೊಡುವ ವ್ಯವಸ್ಥೆ ಮಾಡುತ್ತೇನೆ. ಅದರಲ್ಲಿ ನಿಮ್ಮ ಜನಾಂಗದವರು ಮದುವೆ, ಸಭೆ ಸಮಾರಂಭ ಮಾಡಿಕೊಳ್ಳಲು ಅನುಕೂಲಕರವಾಗುತ್ತದೆ ಎಂದರು.

ಚುನಾವಣೆಯಲ್ಲಿ ಭೋವಿ ಸಮಾಜದವರು 90 ರಷ್ಟು ಮತವನ್ನು ಹಾಕಿ ನನ್ನನ್ನು ಪ್ರೋತ್ಸಾಹ ನೀಡಿ ಗೆಲ್ಲಿಸಿದ್ದು, ಜನರ ಪ್ರೀತಿ ವಿಶ್ವಾಸದಿಂದ ರಾಜಕೀಯದಲ್ಲಿ ಮುಂದೆ ಹೋಗುತ್ತಿದ್ದೇನೆ ಎಂದರು.

ABOUT THE AUTHOR

...view details