ನೇಮರಾಜ್ ಮಾನಸಿಕ ಅಸ್ವಸ್ಥ, ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು: ಶಾಸಕ ಭೀಮಾನಾಯ್ಕ - ನೇಮರಾಜ್ಗೆ ಹುಚ್ಚು ಹಿಡಿದಿದೆ ಎಂದ ಭೀಮಾನಾಯ್ಕ
ಬಿಜೆಪಿ ಕಾರ್ಯಕರ್ತರ ಹಗರಿಬೊಮ್ಮನಹಳ್ಳಿ ಬಂದ್ ವಿಚಾರವಾಗಿ ಶಾಸಕ ಭೀಮಾನಾಯ್ಕ ಪ್ರತಿಕ್ರಿಯಿಸಿದ್ದಾರೆ. ಮಾಜಿ ಶಾಸಕ ಕೆ.ನೇಮರಾಜ ನಾಯ್ಕ ಮಾನಸಿಕ ಅಸ್ವಸ್ಥ.ಅವರನ್ನು ಧಾರವಾಡದ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿ: ಮಾಜಿ ಶಾಸಕ ಕೆ.ನೇಮರಾಜ ನಾಯ್ಕ ಮಾನಸಿಕ ಅಸ್ವಸ್ಥ. ಅವರನ್ನು ಧಾರವಾಡದ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಅಂತ ಕಾಣಿಸುತ್ತೆ ಎಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ಬಿ.ಪಿ. ಭೀಮಾನಾಯ್ಕ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದಿನ ನಡೆದ ಹಗರಿಬೊಮ್ಮನಹಳ್ಳಿ ಬಂದ್ ಅಥವಾ ಪ್ರತಿಭಟನೆ ಮಾಡಿರೋದು ಯಾವ ಪುರುಷಾರ್ಥಕ್ಕೆ ಅಂತ ಪ್ರಶ್ನಿಸಿದ್ದಾರೆ. ನಾನು ತೋಳು ತಟ್ಟಿರೋದು ದುಂಡಾವರ್ತನೆಯಾದ್ರೆ, ಬಿಜೆಪಿ ಕಾರ್ಯಕರ್ತರು ಕಾಂಪೌಂಡ್ ಹಾರಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದು, ಯಾವ ವರ್ತನೆ ಎಂದು ಸ್ಪಷ್ಟಪಡಿಸಬೇಕೆಂದರು.