ಕರ್ನಾಟಕ

karnataka

By

Published : Nov 9, 2020, 9:12 PM IST

ETV Bharat / state

ಬಿಜೆಪಿ ಎಸ್​ಟಿ ಮೋರ್ಚಾ ಅಧ್ಯಕ್ಷರ ಗುಂಡಾವರ್ತನೆಗೆ ನಾನು ತೋಳು ತಟ್ಟಿರೋದು ನಿಜ: ಶಾಸಕ ಭೀಮಾನಾಯ್ಕ್​

ಬಿಜೆಪಿ ಎಸ್​ಟಿ ಮೋರ್ಚಾ ಅಧ್ಯಕ್ಷ ಗರಗದ ಪ್ರಕಾಶ ವಿರುದ್ಧ ನಾನು ತೋಳು ತಟ್ಟಿರೋದು ನಿಜ ಎಂದು ಶಾಸಕ ಭೀಮಾನಾಯ್ಕ್​ ಸ್ಪಷ್ಟಪಡಿಸಿದ್ದಾರೆ.

MLA Bheeema naik
ಶಾಸಕ ಭೀಮಾನಾಯ್ಕ್​

ಬಳ್ಳಾರಿ:ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಿಜೆಪಿ ಎಸ್​ಟಿ ಮೋರ್ಚಾ ಅಧ್ಯಕ್ಷ ಗರಗದ ಪ್ರಕಾಶ ಅವರ ಗುಂಡಾ ವರ್ತನೆಗೆ ರೊಚ್ಚಿಗೆದ್ದು ನಾನು ತೋಳು ತಟ್ಟಿರೋದು ನಿಜ ಎಂದು ಶಾಸಕ ಎಲ್.ಬಿ.ಪಿ. ಭೀಮಾನಾಯ್ಕ್​ ಸ್ಪಷ್ಟಪಡಿಸಿದ್ದಾರೆ.

ಶಾಸಕ ಭೀಮಾನಾಯ್ಕ್​

ಈ ಸಂಬಂಧ ಇಲ್ಲಿಯ ಕನಕದುರ್ಗಮ್ಮ ದೇಗುಲದ ಬಳಿಯಿರುವ ಜಿಲ್ಲಾ ಪೊಲೀಸ್ ಇಲಾಖೆ ಕಚೇರಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಭೀಮಾನಾಯ್ಕ್​ ಬಿಜೆಪಿ ಸದಸ್ಯ ಹುಳ್ಳಿ ಮಂಜುನಾಥ ಅವರನ್ನ ಹೈಜಾಕ್ ಮಾಡಲು ಬಿಜೆಪಿಯವರು ಸಂಚು ರೂಪಿಸಿದ್ದರು. ಹೀಗಾಗಿ, ನನ್ನ ಕಾರಿನೊಳಗೆ ಆತನನ್ನ ಕರೆದುಕೊಂಡು ಬಂದಿದ್ದೆ. ಅವನನ್ನು ಎತ್ತಾಕಿಕೊಂಡು ಬರೋದಾಗಿ ಗರಗದ ಪ್ರಕಾಶ ಅವರು ಪುರಸಭೆ ಗೇಟ್ ನತ್ತ ಓಡೋಡಿ ಬಂದಾಗ ನಾನೂ ಕೂಡ ಅದ್ಹೇಗೆ ಎತ್ತಿ ಹಾಕಿಕೊಂಡು ಹೋಗುತ್ತಿಯಾ ನೋಡೋಣ ಬಾ ಎಂದು ತೋಳು ತಟ್ಟಿರೋದು ನಿಜ. ಚುನಾಯಿತ ಪ್ರತಿನಿಧಿ ಮೇಲೆ ಈ ರೀತಿಯ ಹಲ್ಲೆಗೆ ಮುಂದಾಗೋದನ್ನ ನಾನು ನೋಡಿಕೊಂಡು ಸುಮ್ಮನಿರಬೇಕೆ ಎಂದು ಪ್ರಶ್ನಿಸಿದ್ದಾರೆ.

ಪತಿ ಬಿಜೆಪಿ, ಪತ್ನಿ ಕಾಂಗ್ರೆಸ್​: ಇಲ್ಲಿ ಎಷ್ಟು ಟ್ರ್ಯಾಜಿಡಿ ಇದೆ ಎಂದ್ರೆ ನೋಡಿ. ಗರಗದ ಪ್ರಕಾಶ ಬಿಜೆಪಿ ಎಸ್​ಟಿ ಮೋರ್ಚಾದ ಅಧ್ಯಕ್ಷ. ಆದ್ರೇ, ಆತನ ಪತ್ನಿ ಕಾಂಗ್ರೆಸ್ಸಿಗರು. ಹಾಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಆಗಿದ್ದಾರೆ. ಕಾಂಗ್ರೆಸ್ ಶಾಸಕರ ಮೇಲೇನೇ ಗುಂಡಾವರ್ತನೆ ಪ್ರದರ್ಶನ ಮಾಡೋದಕ್ಕೆ ಬರುವಷ್ಟು ಮುಂದಾಗಿದ್ದಾರೆ ಎಂದರು.

ಸೋತರೂ ಬುದ್ಧಿ ಬರಲಿಲ್ಲ ಆತನಿಗೆ:ಕಳೆದ ಎರಡು ಬಾರಿ ಕೂಡ ವಿಧಾನಸಭಾ ಚುನಾವಣೆಯಲಿ ಮಾಜಿ ಶಾಸಕ ಕೆ.ನೇಮರಾಜ ನಾಯ್ಕ್​ ಅವರನ್ನ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರು ಸೋಲಿಸಿದ್ರೂ ಕೂಡ ಬುದ್ಧಿ ಬರಲಿಲ್ಲ. ಅವರೊಬ್ಬ ಮಾಜಿ ಶಾಸಕರಾಗಿ ಈ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿರೋದಕ್ಕೆ ಯಾವ ಹಕ್ಕಿದೆ. ಇದೆಲ್ಲಾ ಕಾಂಗ್ರೆಸ್ ಪಕ್ಷ ಹಿಡಿಯೋ ಆಡಳಿತದ ಚುಕ್ಕಾಣೆ ತಪ್ಪಿಸೋದೇ ಇದರ ಹಿಂದಿನ ಮರ್ಮವಾಗಿದೆ ಎಂದು ಭಿಮಾನಾಯ್ಕ್​ ಕಿಡಿಕಾರಿದ್ದಾರೆ.

ಬಿಜೆಪಿ ಬೆಂಬಲಿತ ಸದಸ್ಯರು ಕೇವಲ ನಾಲ್ಕೇ ಮಂದಿ ಇರೋದು: ಬಿಜೆಪಿಯಿಂದ ಏಳು ಮಂದಿ ಸದಸ್ಯರಿದ್ದಾರೆ. ಅದರೊಳಗೆ ಒಬ್ಬರು ಸಾವನ್ನಪ್ಪಿದ್ದಾರೆ. ಉಳಿದವರು ಆರು ಮಂದಿ ಇರೋದು‌. ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ಹುಳ್ಳಿ ಮಂಜುನಾಥ ಉಮೇದುವಾರಿಕೆ ಸಲ್ಲಿಸಿದ್ದರು. ಉಳಿದ ಐವರ ಪೈಕಿ ಒಬ್ಬರು ಗೈರು ಹಾಜರಿಯಾಗಿದ್ದರು. ಉಳಿದವರು ಮಾತ್ರ ಕೇವಲ ನಾಲ್ಕೇ ಮಂದಿ ಸದಸ್ಯರಿದ್ದರು. ಆ ನಾಲ್ಕು ಮಂದಿ ಸದಸ್ಯರನ್ನಿಟ್ಟುಕೊಂಡು ಅದ್ಹೇಗೆ ಬಾಡಿ ಫಾರ್ಮೇಷನ್ ಮಾಡಲು ಸಾಧ್ಯವಾಗುತ್ತೆ ಎಂದು ಶಾಸಕ ಭೀಮಾನಾಯ್ಕ ಪ್ರಶ್ನಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ಸಿಪಿಐ ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ:ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಸಂದರ್ಭ 144 ಸೆಕ್ಷನ್ ಜಾರಿಯಲ್ಲಿರುತ್ತೆ. ಅದಾಗ್ಯೂ ಕೂಡ ಬಿಜೆಪಿಗರು ನೂಕಾಟ, ತಳ್ಳಾಟ ನಡೆಸಿದ್ದಾರೆ. ಉಮೇದುವಾರಿಕೆ ಸಲ್ಲಿಕೆ ವೇಳೆ ನೂರಾರು ಮಂದಿ ಪುರಸಭೆ ಕಾರ್ಯಾಲಯದ ಒಳಗಡೆ ಅದ್ಹೇಗೆ ಬಂದಿದ್ದಾರೆ. ಇದೆಲ್ಲಾ ನೋಡಿದ್ರೆ ಸಿಪಿಐ ಅವರು, ಬಿಜೆಪಿಯ ಪರವಾಗಿ ಕೆಲಸ ಮಾಡಿದ್ದಾರೆಂಬುದು ಮೇಲ್ನೋಟಕ್ಕೆ ಕಂಡುಬರುತ್ತೆ. ಹೀಗಾಗಿ, ತನಿಖೆ ನಡೆಸಿ ತಪ್ಪಿ ತಸ್ಥರ ವಿರುದ್ಧ ಸೂಕ್ತಕ್ರಮ ಜರುಗಿಸಬೇಕೆಂದ್ರು ಶಾಸಕ ಭೀಮಾನಾಯ್ಕ ಆಗ್ರಹಿಸಿದ್ದಾರೆ.

ABOUT THE AUTHOR

...view details