ಕರ್ನಾಟಕ

karnataka

ETV Bharat / state

ಸಿಎಂಗೆ ಖಾತೆ ನೀಡಲು ಕಷ್ಟವಾದರೆ ನಾನು ಸಚಿವ ಸ್ಥಾನ ಬಿಡಲು ಸಿದ್ಧ: ಆನಂದ್ ಸಿಂಗ್

ವಿಜಯನಗರ ಜಿಲ್ಲೆ ಘೋಷಣೆಯಿಂದ ಜಿಲ್ಲಾಡಳಿತಕ್ಕೆ ಹಾಗೂ ಜನರಿಗೆ ಅನುಕೂಲವಾಗುತ್ತದೆ. ಶಾಂತ ರೀತಿಯಲ್ಲಿ ಕುಳಿತುಕೊಂಡು ಅಲೋಚನೆ ಮಾಡಬೇಕಾಗುತ್ತದೆ. ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ನೂತನ ಜಿಲ್ಲೆ ರಚನೆ ಮಾಡಲಾಗಿದೆ ಎಂದು ಸಚಿವ ಆನಂದ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Minister anand singh
ಆನಂದ್ ಸಿಂಗ್

By

Published : Nov 18, 2020, 8:17 PM IST

ಹೊಸಪೇಟೆ(ಬಳ್ಳಾರಿ):ವಿಜಯನಗರ ಜಿಲ್ಲೆ ಘೋಷಣೆಯಾಗಿದೆ.‌ ಪಶ್ಚಿಮ ತಾಲೂಕು ಜನರ ಆಸೆ ಈಡೇರಿದೆ. ಒಂದು ವೇಳೆ ಸಚಿವ ಸಂಪುಟದಲ್ಲಿ ಸಚಿವರಿಗೆ ಸ್ಥಾನ ನೀಡಲು ಯಡಿಯೂರಪ್ಪ ಅವರಿಗೆ ಕಷ್ಟವಾದರೆ ಅರಣ್ಯ ಖಾತೆ ತ್ಯಜಿಸಲು ಸಿದ್ಧ ಎಂದು ಅರಣ್ಯ ಖಾತೆ ಸಚಿವ ಆನಂದ್ ಸಿಂಗ್ ಹೇಳಿದರು.

ಹೊಸಪೇಟೆಯಲ್ಲಿ ಮಾತನಾಡಿದ ಸಚಿವ ಆನಂದ್ ಸಿಂಗ್

ನಗರದ ಶಾಸಕರ ಕಾರ್ಯಾಲಯದಲ್ಲಿ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಒತ್ತಾಯಪೂರ್ವಕವಾಗಿ ಸಚಿವ ಸ್ಥಾನವನ್ನು ನೀಡುತ್ತಿಲ್ಲ.‌ ಬೇಡಿಕೆಯನ್ನು ಈಡೇರಿಸಿದ್ದಾರೆ.‌ ಹೆಚ್ಚಿನದು ಏನು ಬೇಡ, ಹೆಚ್ಚಿನ ಆಸೆ ಪಟ್ಟರೆ ದುರಾಸೆಯಾಗುತ್ತದೆ. ಹಾಗಾಗಿ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು.

ಶಾಸಕ ಸೋಮಶೇಖರ್ ರೆಡ್ಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶವಿದೆ. ಭೌಗೋಳಿಕವಾಗಿ ಆಲೋಚನೆ ಮಾಡಬೇಕಾಗುತ್ತದೆ. ಚಿಕ್ಕ ಸಂಸಾರ, ಚೊಕ್ಕ ಸಂಸಾರ ಎಂಬ ಮಾತಿನ ತರಹ. ಜಿಲ್ಲೆ ಘೋಷಣೆಯಿಂದ ಜಿಲ್ಲಾಡಳಿತಕ್ಕೆ ಹಾಗೂ ಜನರಿಗೆ ಅನುಕೂಲವಾಗುತ್ತದೆ. ಶಾಂತ ರೀತಿಯಲ್ಲಿ ಕುಳಿತುಕೊಂಡು ಅಲೋಚನೆ ಮಾಡಬೇಕಾಗುತ್ತದೆ. ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ನೂತನ ಜಿಲ್ಲೆ ರಚನೆ ಮಾಡಲಾಗಿದೆ. ಇಲ್ಲಿ ‌ಗೊಂದಲಕ್ಕೆ ಅವಕಾಶವಿಲ್ಲ ಎಂದರು.

ಕೆಎಂಇಎಆರ್​ಸಿಗೆ 16,000 ಸಾವಿರ ಕೋಟಿ ರೂ. ಅನುದಾವಿದೆ. ಹಾಗಾಗಿ ‌‌ಜಿಲ್ಲೆಗೆ ಯಾವುದೇ ಅನುದಾನದ ಕೊರತೆ ಬರುವುದಿಲ್ಲ.‌ ಅನುದಾನಕ್ಕೆ ಮನವಿ ಸಲ್ಲಿಸಲು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರ್ಪಡೆಗೊಳಿಸಲು ತಾಂತ್ರಿಕ ತೊಂದರೆ ಇದೆ ಎಂದು ಹೇಳಿದರು. ಇದಕ್ಕೂ ಮುನ್ನ ನಗರದ ಮುನ್ಸಿಪಲ್ ಕ್ರೀಡಾಂಗಣದಲ್ಲಿ ಹೆಲಿಕಾಪ್ಟರ್ ಮೂಲಕ ಬಂದಿಳಿದ ಸಚಿವ ಆನಂದ್​ ಸಿಂಗ್ ಅವರನ್ನು ಅಭಿಮಾನಿಗಳು ಹೂವಿನ ಹಾರ ಹಾಕಿ ಹಾಗೂ ಸಿಹಿ ತಿನಿಸು‌ವ ಮೂಲಕ ಸ್ವಾಗತ ಮಾಡಿದರು.

ABOUT THE AUTHOR

...view details