ಕರ್ನಾಟಕ

karnataka

By

Published : Jan 21, 2020, 8:16 PM IST

Updated : Jan 21, 2020, 9:43 PM IST

ETV Bharat / state

ತರಕಾರಿ ಮಾರುಕಟ್ಟೆ ಕಟ್ಟಡ ಕಾಮಗಾರಿ ವಿಳಂಬ: ಅಧಿಕಾರಿಗಳ ವಿರುದ್ಧ ವರ್ತಕರ ದೂರು

ಬಳ್ಳಾರಿಯ ತೇರು ಬೀದಿಯಲ್ಲಿ‌ರುವ ದೊಡ್ಡ ತರಕಾರಿ ಮಾರುಕಟ್ಟೆಯ ಕಟ್ಟಡ ಕಾಮಗಾರಿ ವಿಳಂಬವಾಗಿದೆ ಎಂದು ಜೈ ಕರ್ನಾಟಕ ಕಾಯಿಪಲ್ಲೆ ಚಿಲ್ಲರೆ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Market building delays
ದೊಡ್ಡ ತರಕಾರಿ ಮಾರುಕಟ್ಟೆ

ಬಳ್ಳಾರಿ:ನಗರದ ತೇರು ಬೀದಿಯಲ್ಲಿ‌ರುವ ದೊಡ್ಡ ತರಕಾರಿ ಮಾರುಕಟ್ಟೆಯ ಕಟ್ಟಡ ಕಾಮಗಾರಿ ವಿಳಂಬವಾಗಿದೆ ಎಂದು ಜೈ ಕರ್ನಾಟಕ ಕಾಯಿಪಲ್ಲೆ ಚಿಲ್ಲರೆ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಬಿ.ಅಂಜದ್ ಅಲಿ ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಗುತ್ತಿಗೆದಾರರ ವಿರುದ್ಧ ದೂರಿದರು.

ಈಟಿವಿ ಭಾರತದೊಂದಿಗೆ ಮಾತನಾಡಿದ ಕಾರ್ಯದರ್ಶಿ ಬಿ.ಅಂಜದ್ ಅಲಿ ತರಕಾರಿ ದೊಡ್ಡ ಮಾರುಕಟ್ಟೆ ಕಾಮಗಾರಿ ಟೆಂಡರ್​ ಅನ್ನು ಸಿವಿಲ್ ಇಂಜಿನಿಯರ್ ಆದ ಪ್ರಥಮ ಗುತ್ತಿಗೆದಾರ ಹೆಚ್.ಅಮರೇಶ್ ಅವರಿಗೆ ನೀಡಿದ್ದಾರೆ.

ಈಟಿವಿ ಭಾರತದ ಪತ್ರಿನಿಧಿಯೊಂದಿಗೆ ದೂರವಾಣಿ ಮೂಲಕ ಸಿವಿಲ್ ಇಂಜಿನಿಯರ್ ಹೆಚ್.ಅಮರೇಶ್ ಮಾತನಾಡಿ ಈ ಕಾಮಗಾರಿ ಮೊದಲನೇ ಮಹಡಿ ಪ್ಲಾಸ್ಟರಿಂಗ್ ಕೆಲಸ ಮಾತ್ರ ಬಾಕಿ ಇದ್ದು, ಸದರಿ ಬಿಲ್ಲುಗಳನ್ನು ಯಾವ ಅನುದಾನದ ಅಡಿ ಪಾವತಿಸಬೇಕು ಎಂದು ತಿಳಿಯದೇ ಇರುವುದರಿಂದ ಕಾಮಗಾರಿಯನ್ನು ನಿಲ್ಲಿಸಿರುತ್ತೇನೆ ಎಂದು ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಬರೆದ ಪತ್ರದಲ್ಲಿ ಸಮಜಾಯಿಷಿ ನೀಡಿದ್ದಾರೆ.

ಮಾರುಕಟ್ಟೆ ಕಟ್ಟಡ ಕಾಮಗಾರಿ ವಿಳಂಬ..

ಕಾಮಗಾರಿ ವಿಳಂಬದ ಬಗ್ಗೆ ಗುತ್ತಿಗೆದಾರರು ಹೊಣೆಗಾರರಲ್ಲ ಎಂದು 27ನವೆಂಬರ್ 2019 ರಂದು ಆಯುಕ್ತರಿಗೆ ಪತ್ರದ ಮೂಲಕ ಅವರು ತಿಳಿಸಿದ್ದಾರೆ. ತರಕಾರಿ ಮಾರುವ ವರ್ತಕರಿಗೆ ನಿತ್ಯ ರಸ್ತೆಯಲ್ಲಿ ದೂಳು ಕುಡಿಯುವ, ಬಿಸಿನಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿ ಉಂಟಾಗಿದೆ.

Last Updated : Jan 21, 2020, 9:43 PM IST

For All Latest Updates

ABOUT THE AUTHOR

...view details