ಹೊಸಪೇಟೆ (ವಿಜಯನಗರ):ವಿಜಯನಗರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಇಂದು ಮೊದಲ ಬಲಿ ಪಡೆದುಕೊಂಡಿದೆ.
ವಿಜಯನಗರ: ಬ್ಲ್ಯಾಕ್ ಫಂಗಸ್ಗೆ ವ್ಯಕ್ತಿ ಬಲಿ - ಬ್ಲ್ಯಾಕ್ ಫಂಗಸ್ ಲಕ್ಷಣಗಳು
ವಿಜಯನಗರದಲ್ಲಿ ಬ್ಲ್ಯಾಕ್ ಫಂಗಸ್ ರೋಗಕ್ಕೆ ವ್ಯಕ್ತಿ ಬಲಿಯಾಗಿದ್ದು, ಇವರಲ್ಲಿ ಮೊದಲು ಕೊರೊನಾ ಪತ್ತೆಯಾಗಿತ್ತು. ಬಳಿಕ ಗುಣಮುಖರಾದ ಸಂದರ್ಭದಲ್ಲಿ ಬ್ಲ್ಯಾಕ್ ಫಂಗಸ್ ಲಕ್ಷಣಗಳು ಪತ್ತೆಯಾಗಿದ್ದವು.
man dies for black fungus in vijayanagara
ಹರಪನಹಳ್ಳಿ ತಾಲೂಕಿನ ಉದ್ಗಟ್ಟಿ ತಾಂಡಾದ ಕೊಟ್ರೇಶ್ ನಾಯ್ಕ್ (55) ಬ್ಲ್ಯಾಕ್ ಫಂಗಸ್ಗೆ ಬಲಿಯಾದ ವ್ಯಕ್ತಿ. ಇವರಲ್ಲಿ ಮೊದಲು ಕೊರೊನಾ ಪತ್ತೆಯಾಗಿದ್ದು, ಬಳಿಕ ಗುಣಮುಖರಾದ ಸಂದರ್ಭದಲ್ಲಿ ಬ್ಲ್ಯಾಕ್ ಫಂಗಸ್ ಲಕ್ಷಣಗಳು ಪತ್ತೆಯಾಗಿದ್ದವು.
ಹರಪನಹಳ್ಳಿಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ತೆರಳಿದ್ದರು. ಆದರೆ, ಈಗ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಬ್ಲ್ಯಾಕ್ ಫಂಗಸ್ನಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.