ವಿಜಯನಗರ: ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಅಜ್ಜ, ಮೊಮ್ಮಗ ಇಬ್ಬರೂ ಮೃತಪಟ್ಟ ಘಟನೆ ಕೂಡ್ಲಿಗಿ ತಾಲ್ಲೂಕಿನ ಕಕ್ಕುಪ್ಪಿ ಗ್ರಾಮದ ಬಳಿ ಗುರುವಾರ ರಾತ್ರಿ ನಡೆದಿದೆ. ತಾಲ್ಲೂಕಿನ ನಾಗರಹುಣಸೆ ಗ್ರಾಮದ ಭೀಮಪ್ಪ (55) ಹಾಗು ಆದಿ (5) ಮೃತರು. ಘಟನೆಯಲ್ಲಿ ಪಿ.ಆರ್.ವಿನಯ್ ಕುಮಾರ್ ಎಂಬವರೂ ಗಾಯಗೊಂಡಿದ್ದಾರೆ.
ಶಾಲೆಯಿಂದ ಮೊಮ್ಮಗನ ಕರೆ ತರುತ್ತಿದ್ದಾಗ ಲಾರಿ ಡಿಕ್ಕಿ; ಅಜ್ಜ-ಮೊಮ್ಮಗನ ದಾರುಣ ಸಾವು - vijayanagar road accident
ಶಾಲೆಯಿಂದ ಮೊಮ್ಮಗನನ್ನು ಬೈಕ್‌ನಲ್ಲಿ ಮನೆಗೆ ಕರೆದುಕೊಂಡು ಹೋಗುವಾಗ ಲಾರಿ ಡಿಕ್ಕಿ ಹೊಡೆದು ಇಬ್ಬರೂ ಮೃತಪಟ್ಟ ದಾರುಣ ಘಟನೆ ವಿಜಯನಗರದಲ್ಲಿಂದು ನಡೆದಿದೆ.
ಲಾರಿ ಬೈಕ್ ಡಿಕ್ಕಿ ಇಬ್ಬರು ಸಾವು ಓರ್ವ ಗಾಯ...
ಮಾರ್ಗಮಧ್ಯದಲ್ಲಿ ಜೊತೆಯಾದ ಅದೇ ಗ್ರಾಮದ ವಿನಯ್ ಕುಮಾರ್ ಅವರನ್ನೂ ಬೈಕ್‌ನಲ್ಲಿ ಹತ್ತಿಸಿಕೊಂಡು ಗ್ರಾಮಕ್ಕೆ ತೆರಳುತ್ತಿದ್ದಾಗ ಗುಡಕೋಟೆಯಿಂದ ವೇಗವಾಗಿ ಬಂದ ಲಾರಿ, ಬೈಕ್‌ಗೆ ಗುದ್ದಿದೆ. ಆದಿ ಸ್ಥಳದಲ್ಲೇ ಮೃತಪಟ್ಟರೆ, ಭೀಮಪ್ಪ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಕೊನೆಯುಸಿರೆಳೆದರು. ಗಾಯಾಳು ವಿನಯ್ ಕುಮಾರ್ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ನದಿಯಲ್ಲಿ ಕಾರು ಕೊಚ್ಚಿ ಹೋಗಿ ಸೇರಿ 9 ಜನ ಸಾವು, ಪವಾಡದಂತೆ ಬದುಕುಳಿದ ಮಗು