ಕರ್ನಾಟಕ

karnataka

ETV Bharat / state

ಮೃಗಾಲಯಗಳಿಗೆ ಗೋ ಹತ್ಯೆ ನಿಷೇಧ ಕಾಯ್ದೆ ಅನ್ವಯ ಬೇಡ: ಅಧಿಕಾರಿ ಒತ್ತಾಯ

ಮೃಗಾಲಯಗಳಿಗೆ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಅನ್ವಯಿಸುವುದು ಬೇಡ. ಇದರಿಂದಾಗಿ ಪ್ರಾಣಿಗಳ ಆಹಾರದ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಪ್ರಾಣಿಗಳ ಉಳಿವಿಗಾಗಿ ಮೃಗಾಲಯಗಳಿಗೆ ಈ ಕಾನೂನಿನಿಂದ ವಿನಾಯಿತಿ ಬೇಕು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಗೋ ಹತ್ಯೆ ನಿಷೇಧ ಕಾಯ್ದೆ
ಗೋ ಹತ್ಯೆ ನಿಷೇಧ ಕಾಯ್ದೆ

By

Published : Feb 2, 2021, 7:13 PM IST

ಹೊಸಪೇಟೆ: ಗೋ ಮಾಂಸ ನಿಷೇಧದಿಂದ ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಸಂಕಷ್ಟ ಎದುರಾಗಿದೆ. ಹೊಸಪೇಟೆ ತಾಲೂಕಿನ ಅಟಲ್ ಬಿಹಾರಿ ಜೂಲಾಜಿಕಲ್ ಪಾರ್ಕ್ ಸಿಂಹ, ಹುಲಿಗಳು ದನದ ಮೌಂಸವಿಲ್ಲದೆ ಪರ್ಯಾಯವಾಗಿ ಕೋಳಿ ಮಾಂಸ ತಿನ್ನುವಂತ ಸ್ಥಿತಿ ಎದುರಾಗಿದೆ.

ಮೃಗಾಲಯಗಳಿಗೆ ಗೋ ಹತ್ಯೆ ನಿಷೇಧ ಕಾಯ್ದೆ ಅನ್ವಯ ಬೇಡ: ಅಧಿಕಾರಿ ಒತ್ತಾಯ
ಸಿಂಹ, ಹುಲಿ ಸೇರಿದಂತೆ ಪ್ರಾಣಿಗಳಿಗೆ ಈ ಮುಂಚೆ ದನದ ಮಾಂಸವನ್ನು ಆಹಾರವನ್ನಾಗಿ ನೀಡಲಾಗುತ್ತಿತ್ತು. ಆದರೆ ಗೋಹತ್ಯೆ ನಿಷೇಧ ಕಾಯ್ದೆಯಿಂದ ಪ್ರಾಣಿಗಳಿಗೆ ಕೋಳಿ ಮಾಂಸ ನೀಡಲಾಗುತ್ತಿದೆ. ಆದರೆ ಪ್ರಾಣಿಗಳು ಕೋಳಿ ತಿನ್ನಲು ಹಿಂದೇಟು ಹಾಕುತ್ತಿದ್ದು, ಅಧಿಕಾರಿಗಳಿಗೆ ತೆಲೆನೋವಾಗಿ ಪರಿಣಮಿಸಿದೆ.

ಮೃಗಾಲಯಗಳಿಗೆ ಈ ಕಾಯ್ದೆ ಬೇಡ

ಮೃಗಾಲಯಗಳಿಗೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ಅನ್ವಯಿಸುವುದು ಬೇಡ. ಇದರಿಂದಾಗಿ ಪ್ರಾಣಿಗಳ ಆಹಾರದ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಪ್ರಾಣಿಗಳ ಉಳಿವಿಗಾಗಿ ಮೃಗಾಲಯಗಳಿಗೆ ಈ ಕಾನೂನಿನಿಂದ ವಿನಾಯಿತಿ ಬೇಕು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಅಟಲ್ ಬಿಹಾರಿ ಜೂಲಾಜಿಕಲ್ ಪಾರ್ಕ್​ನ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್.ಕಿರಣ್ ಕುಮಾರ್, ಸಿಂಹ, ಹುಲಿ, ಗುಳ್ಳೆ ನರಿ, ಕತ್ತೆ ಕಿರುಬ, ತೋಳ ಪ್ರಾಣಿಗಳು ಸೇರಿ ಮೃಗಾಲಯದಲ್ಲಿ ಒಟ್ಟು 34 ಮಾಂಸಹಾರಿ ಪ್ರಾಣಿಗಳಿವೆ.‌ ಈ ಮುಂಚೆ ಗಂಡು ಹುಲಿಗೆ ದಿನಕ್ಕೆ 10 ಕೆಜಿ ಹಾಗೂ ಹೆಣ್ಣು ಹುಲಿಗೆ 8 ಕೆಜಿ ದನದ ಮಾಂಸ ನೀಡಲಾಗುತ್ತಿತ್ತು. ಈಗ ಕೋಳಿ ಮಾಂಸ ನೀಡಲಾಗುತ್ತಿದ್ದು, ಈ ಹೊಸ ಆಹಾರ ಪದ್ಧತಿಗೆ ಪ್ರಾಣಿಗಳು ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮೃಗಾಲಯಗಳಿಗೆ ಗೋಹತ್ಯೆ ನಿಷೇಧ ಕಾಯ್ದೆಯಿಂದ ವಿನಾಯಿತಿ ಕೊಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ABOUT THE AUTHOR

...view details