ಬಳ್ಳಾರಿ(ಹೊಸಪೇಟೆ):ಜಿಲ್ಲೆಯ ಕಂಪ್ಲಿಯಲ್ಲಿ ಇಟಗಿ ಗ್ರಾಮದ ಬಳಿ ವಿದ್ಯುತ್ ಕಂಬದಲ್ಲಿ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್ಮನ್ ಹನುಮಂತಪ್ಪ ಮೃತಪಟ್ಟ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಜೆಸ್ಕಾಂ ಸಿಬ್ಬಂದಿ ಒತ್ತಾಯಿಸಿದ್ದಾರೆ.
ಕರ್ತವ್ಯನಿರತ ಲೈನ್ಮನ್ ಸಾವು ಪ್ರಕರಣದ ತನಿಖೆಗೆ ಆಗ್ರಹ
ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಲೈನ್ಮನ್ ಸಾವನ್ನಪ್ಪಿದ್ದು, ಸಮಗ್ರ ತನಿಖೆ ನಡೆಸಬೇಕೆಂದು ಜೆಸ್ಕಾಂ ಸಿಬ್ಬಂದಿ ಒತ್ತಾಯಿಸಿದ್ದಾರೆ.
Meeting
ಜೆಸ್ಕಾಂ ಆವರಣದಲ್ಲಿ ನಡೆಸಿದ ಸಭೆಯಲ್ಲಿ ಜೆಸ್ಕಾಂ ಸಿಬ್ಬಂದಿ, ಕರ್ತವ್ಯನಿರತರಾದ ಸಂದರ್ಭದಲ್ಲಿ ಹನುಮಂತಪ್ಪ ಅವರು ಮೃತಪಟ್ಟಿದ್ದಾರೆ. ಇದು ದುಃಖಕರ ಸಂಗತಿಯಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕೆಪಿಟಿಸಿಎಲ್ ನೌಕರರ ಸಂಘದ ಕೇಂದ್ರ ಸಮಿತಿಯ ಸದಸ್ಯ ಎಸ್.ಬಿ.ಆನಂದ, ಹೊಸಪೇಟೆ ಗ್ರಾಮೀಣ ವಿಭಾಗದ ಎಇಇ ನರೇಶ, ಸೆಕ್ಷನ್ ಅಧಿಕಾರಿ ಮಹಾಂತೇಶ ಎಸ್. ತುಂಬದ್ ಇನ್ನಿತರರಿದ್ದರು.