ಬಳ್ಳಾರಿ:ಯಾರೂ ಇಲ್ಲದ ವೇಳೆ ಮನೆಯ ಬೀಗ ಮುರಿದು ನಗದು ಹಣ ಹಾಗೂ ಲಕ್ಷಾಂತರ ರೂ. ಬೆಲೆಬಾಳುವ ಬೆಳ್ಳಿ ಹಾಗೂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಗರದ ಮೋಕ ರಸ್ತೆಯಲ್ಲಿ ನಡೆದಿದೆ.
ಮನೆ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ
ಮನೆಯೊಂದರ ಬೀಗ ಮುರಿದು ನಗದು ಹಣ ಹಾಗೂ ಲಕ್ಷಾಂತರ ರೂ. ಬೆಲೆಬಾಳುವ ಬೆಳ್ಳಿ ಹಾಗೂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಚಿನ್ನಾಭರಣ, ನಗದು ಕಳ್ಳತನ
ಇಲ್ಲಿನ ಗಾಂಧಿನಗರದ ಠಾಣೆ ವ್ಯಾಪ್ತಿಯ ಮೋಕ ರಸ್ತೆಯಲ್ಲಿನ ಸೋಮಶೇಖರ್ ಎಂಬುವರ ಮನೆಯಲ್ಲಿ 249 ಗ್ರಾಂ ಚಿನ್ನಾಭರಣ, 2.5 ಕೆ.ಜಿ ಬೆಳ್ಳಿ, 85,000 ನಗದು ಹಣ ಕಳ್ಳತನವಾಗಿದೆ. ಡಿ.8ರಂದು ಸೋಮಶೇಖರ್ ಮತ್ತು ಅವರ ಕುಟುಂಬದವರು ಊರಿಗೆ ಹೋಗಿದ್ದರು. ಆದರೆ ಡಿ.19ರಂದು ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.