ಕರ್ನಾಟಕ

karnataka

ETV Bharat / state

ಬಳ್ಳಾರಿ: ಲಾರಿ ಹರಿದು ಕೆಎಸ್ಆರ್‌ಟಿಸಿ ನೌಕರ ಸಾವು - ksrtc worker died ballary

ಬಳ್ಳಾರಿಯ ಕೊಟ್ಟೂರು ತಾಲೂಕಿನಲ್ಲಿ ಲಾರಿ ಹರಿದು ಕೆಎಸ್ಆರ್‌ಟಿಸಿ ನೌಕರ ಶಿವಪ್ರಕಾಶ ಸಾವನ್ನಪ್ಪಿದ್ದಾರೆ.

ballari
ಸಾವನ್ನಪ್ಪಿದ ಕೆಎಸ್ಆರ್‌ಟಿಸಿ ನೌಕರ

By

Published : May 12, 2020, 11:02 AM IST

ಬಳ್ಳಾರಿ: ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಲಾರಿ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಚಪ್ಪರದಹಳ್ಳಿ ಬಳಿ ಘಟನೆ ನಡೆದಿದೆ. ಪಟ್ಟಣದ ಕೆಎಸ್ಆರ್‌ಟಿಸಿ ನೌಕರ ಶಿವಪ್ರಕಾಶ (58) ಮೃತ ವ್ಯಕ್ತಿ. ಇವರು ಪಟ್ಟಣದಿಂದ ಚಪ್ಪರದಹಳ್ಳಿ ಗ್ರಾಮದ ಕಡೆ ತೆರಳಿದ್ದು, ಮರಳಿ ಕೊಟ್ಟೂರಿಗೆ ಬರುವಾಗ ಆಂಧ್ರ ಪ್ರದೇಶದ ಮಿನಿ ಲಾರಿ ಶಿವಪ್ರಕಾಶರ ಮೇಲೆ ಹರಿದಿದೆ.

ಇನ್ನು ತೀವ್ರ ಗಾಯಗೊಂಡಿದ್ದ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಕರೆ ತಂದು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details