ಕರ್ನಾಟಕ

karnataka

ETV Bharat / state

ಇರಲಾರದೆ ಇರುವೆ ಬಿಟ್ಟುಕೊಂಡ... ಸುಮ್ಮನಿದ್ದ ಕರಡಿ ಮೇಲೆ ಕಲ್ಲೆಸೆದು ದಾಳಿ ಮಾಡಿಸಿಕೊಂಡ ರೈತ - kannada news

ಊರ ಹಳ್ಳಕ್ಕೆ ಕರಡಿ ಬಂದಿದೆ ಎಂದು ನೋಡಲು ಹೋಗಿ ಸುಮ್ಮನಿರದೆ ಅದಕ್ಕೆ ಕಲ್ಲು ಎಸೆದ ರೈತನ ಮೇಲೆ ಕರಡಿ ದಾಳಿ ನಡೆಸಿದ್ದು, ಪರಚಿ ಗಾಯಗೊಳಿಸಿದೆ.

ಕರಡಿ ಧಾಳಿ

By

Published : May 5, 2019, 9:15 PM IST

ಬಳ್ಳಾರಿ :ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಮಿಟಿ ಗ್ರಾಮದ ರೈತನ ಮೇಲೆ ಕರಡಿ ದಾಳಿ ನಡೆಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಗ್ರಾಮದ ಹಳ್ಳದಲ್ಲಿ ಕರಡಿ ಬಂದಿದೆ ಎಂದು ಅದನ್ನು ನೋಡಲು ಹೋದ ವ್ಯಕ್ತಿ ತಿಪ್ಪೇಶ್ ಸುಮ್ಮನೆ ಇರದೆ ಅದಕ್ಕೆ ಕಲ್ಲು ಎಸೆದಿದ್ದಾನೆ‌. ಕೋಪಗೊಂಡ ಕರಡಿ ರೈತನ ಮೇಲೆ ದಾಳಿ ನಡಿಸಿದ್ದು ಊರಿನ ಜನರ ಸೇರುತಿದ್ದಂತೆ ವ್ಯಕ್ತಿಯನ್ನ ಬಿಟ್ಟು ಓಡಿಹೋಗಿದೆ. ಘಟನೆಯಲ್ಲಿ ಕಾಲಿಗೆ ಗಾಯಗಳಾಗಿದ್ದು ಬಿಟ್ಟರೆ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ದಿನದಿಂದ ದಿನಕ್ಕೆ ಕೂಡ್ಲಿಗಿ ತಾಲೂಕಿನಲ್ಲಿ ಕರಡಿಗಳು ಜನರ ಮೇಲೆ ದಾಳಿ ಮಾಡುತ್ತಿರುವುದು ನಿರಂತರ ವಾಗಿ ನಡೆಯಿತ್ತಿದೆ. ಒಂದು ಕಡೆ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಗಳ ವಾಸ ಸ್ಥಳದಲ್ಲಿಯೇ ಜನರು ವಾಸವಾದರೇ ಹೇಗೆ ? ಎನ್ನುವ ಪ್ರಶ್ನೆ, ಮತ್ತೊಂದೆಡೆ ರೈತರು ದಿನದಿತ್ಯ ತಮ್ಮ ಜಮೀನುಗಳಿಗೆ ಕೆಲಸಕ್ಕೆ ಹೋಗುವುದು ಹೇಗೆ ? ಎನ್ನುವ ಪ್ರಶ್ನೆ ರೈತರನ್ನ ಕಾಡುತ್ತಿದೆ.

ಸದ್ಯ ಸ್ಥಳಕ್ಕೆ ಗುಡೇಕೋಟೆ ಉಪ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ABOUT THE AUTHOR

...view details