ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸ ಮಲಪನಗುಡಿ ಗ್ರಾಮದಲ್ಲಿ ಜುಲೈ 25ರಂದು ಅಪಹರಣಕ್ಕೊಳಗಾಗಿದ್ದ 4 ವರ್ಷದ ಬಾಲಕಿ ಪತ್ತೆಯಾಗಿದ್ದಾಳೆ.
ಹೊಸಪೇಟೆಯಲ್ಲಿ ಅಪಹರಣಕ್ಕೊಳಗಾದ 4 ವರ್ಷದ ಬಾಲಕಿ ಕೊನೆಗೂ ಪತ್ತೆ! - ಬಾಲಕಿ ಅಪಹರಣ
ಜುಲೈ 25ರಂದು ಅಪಹರಣಕ್ಕೊಳಗಾಗಿದ್ದ 4 ವರ್ಷದ ಬಾಲಕಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕು ವರ್ಷದ ಬಾಲಕಿ ಪತ್ತೆ
ಹೊಸಮಲಪನಗುಡಿ ಗ್ರಾಮದ ಪಂಚಪ್ಪ ಹಾಗೂ ಶಿವಮ್ಮ ದಂಪತಿ ಪುತ್ರಿ ಶೃತಿ ಅಪಹರಣಕ್ಕೆ ಒಳಗಾಗಿದ್ದ ಬಾಲಕಿ. ಎರಡು ದಿನಗಳ ಹಿಂದೆ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಆತಂಕಗೊಂಡ ಬಾಲಕಿಯ ಪೋಷಕರು ತೀವ್ರ ಹುಡುಕಾಟ ನಡೆಸಿದ್ದರು. ಆದರೆ, ಬಾಲಕಿ ಮಾತ್ರ ಪತ್ತೆಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಹಂಪಿ ಪೊಲೀಸ್ ಠಾಣೆಗೆ ತೆರಳಿ ಬಾಲಕಿ ಪಾಲಕರು ದೂರು ದಾಖಲಿಸಿದ್ದು, ಸಂಜೆ ವೇಳೆಗೆ ಆ ಬಾಲಕಿ ಸಿಕ್ಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.