ಹೊಸಪೇಟೆ: ಬಡಜನರ ಕನಸಿನ ಮನೆಯೊಂದಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ. ಜನರ ದುಡ್ಡಿಗೆ ನ್ಯಾಯ ಸಿಗದಂತಾಗಿದೆ.
ಹೊಸಪೇಟೆಯಲ್ಲಿ ನಿವೇಶನಕ್ಕಾಗಿ 975 ಜನರು ಕರ್ನಾಟಕ ಗೃಹ ಮಂಡಳಿಗೆ 2019ರ ಆಗಸ್ಟ್ನಲ್ಲಿ ಹಣವನ್ನು ಪಾವತಿಸಿದ್ದಾರೆ. ಒಂದು ವರ್ಷ ಕಳೆದರೂ ಜನರಿಗೆ ನಿವೇಶನದ ಕುರಿತು ಸ್ಪಷ್ಟತೆ ಸಿಗದೇ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿದ್ದ ನಗರದ ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ ಕಾರ್ಖಾನೆ ಮುಚ್ಚಲ್ಪಟ್ಟಿತ್ತು. ಬಳಿಕ 2019 ಜನವರಿ ತಿಂಗಳಿನಲ್ಲಿ ಕರ್ನಾಟಕ ಗೃಹ ಮಂಡಳಿಗೆ 82.37 ಎಕರೆ ಪ್ರದೇಶವನ್ನು 55.22 ಕೋಟಿ ರೂಪಾಯಿಗೆ ಪರಭಾರೆಯನ್ನು ಮಾಡಲಾಗಿತ್ತು. ಕರ್ನಾಟಕ ಗೃಹ ಮಂಡಳಿ ಈ ಪ್ರದೇಶವನ್ನು ಸುಪರ್ದಿಗೆ ಪಡೆದುಕೊಂಡು ಆಗಸ್ಟ್ ತಿಂಗಳಿನಲ್ಲಿ ನೋಟಿಫಿಕೇಶನ್ ಹೊರಡಿಸಿತ್ತು. ಆಗ ಗೃಹ ಮಂಡಳಿಗೆ 975 ಜನರು ಹಣವನ್ನು ಪಾವತಿಸಿದ್ದರು.
ಮಾತು ಮರೆತ ಸಚಿವ: ಕೆಳ ತಿಂಗಳ ಹಿಂದೆ ಹೊಸಪೇಟೆಯ ಕರ್ನಾಟಕ ಗೃಹ ಮಂಡಳಿಯ ಪ್ರದೇಶಕ್ಕೆ ವಸತಿ ಸಚಿವ ವಿ.ಸೋಮಣ್ಣ ಅವರು ಭೇಟಿ ನೀಡಿದ್ದರು. ಆಗ ಅರಣ್ಯ ಸಚಿವ ಆನಂದ ಸಿಂಗ್ ಅವರು ಜೊತೆಯಲ್ಲಿದ್ದರು. ಆ ಸಂದರ್ಭದಲ್ಲಿ ಜನರಿಗೆ ಇಗೀನ ಪ್ರದೇಶವನ್ನು ಸರಕಾರದ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುವುದು. ಜನರಿಗೆ ಬೇರೆ ಸ್ಥಳದಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು. ಅಲ್ಲದೇ, ಜನರ ಹಣಕ್ಕೆ ಬಡ್ಡಿ ಹಾಕಿ ಕೊಡಲಾಗುವುದುವ ಭರವಸೆ ನೀಡಿದ್ದರು. ಆದರೆ ಸಚಿವರು ಆಡಿದ ಮಾತು ಮಾತಾಗಿಯೇ ಉಳಿದಿದೆ. ಜನರಿಗೆ ನೀಡಿದ ಭರವಸೆಗಳ ಕಡತಗಳಲ್ಲಿ ಕಾಣಸಿಗುತ್ತಿಲ್ಲ.