ಬಳ್ಳಾರಿ:ಕೊರೊನಾ ಸೋಂಕು ನೆಪವೊಡ್ಡಿ ಮೌಢ್ಯಾಚರಣೆ ಮಾಡೋದನ್ನ ಜಿಲ್ಲೆಯ ಜನರು ಮುಂದುವರಿಸಿದರೆ ಕಾನೂನಾತ್ಮಕವಾಗಿ ಶಿಸ್ತುಕ್ರಮ ಎದುರಿಸಬೇಕಾಗುತ್ತೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ನೆಪವೊಡ್ಡಿ ಮೌಢ್ಯಾಚರಣೆ ಮುಂದುವರಿದರೆ ಕಠಿಣ ಕ್ರಮ: ಸಿಇಒ ನಂದಿನಿ
ಕೊರೊನಾ ತೊಲಗಿಸಲು ನಾಲ್ಕಾರು ಟ್ರ್ಯಾಕ್ಟರ್ಗಳಲ್ಲಿ ಅನ್ನವನ್ನು ತುಂಬಿಕೊಂಡು ಆ ಗ್ರಾಮದ ಸುತ್ತಲೂ ಚೆಲ್ಲೋದು ಅತ್ಯಂತ ಹ್ಯೇಯ ಕೃತ್ಯವಾಗಿದೆ. ಈ ಮೌಢ್ಯಾಚರಣೆಯಂತಹ ಅನಿಷ್ಠ ಪದ್ಧತಿ ಮಿತಿ ಮೀರಿ ಹೋದ್ರೆ ನಾವು ಕೈಕಟ್ಟಿ ಕೂರುವುದಿಲ್ಲ. ಇದಕ್ಕೆ ಕಾರಣರಾದವರು ಕಾನೂನಾತ್ಮಕ ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತದೆ ಎಂದರು.
ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಕಗ್ಗಲ್ ಗ್ರಾಮದಲ್ಲಿ ಮಂಗಳವಾರ ನಡೆದ ಮೌಢ್ಯಾಚರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಮೌಢ್ಯಾಚರಣೆ ಬಗ್ಗೆ ಮೊದಲೇ ಅಲ್ಲಿನ ಪಿಡಿಓಗೆ ತಿಳಿದಿರೋಲ್ವೇ ಎಂದಾಗ, ಇದಕ್ಕಾಗಿ ಗ್ರಾಮ ಪಂಚಾಯಿತಿ ಹಾಗೂ ಫ್ಯಾಮಿಲಿ ಟಾಸ್ಕ್ ಪೋರ್ಸ್ಗಳಿವೆ. ಈ ಮೌಢ್ಯಾಚರಣೆ ಹಾಗೂ ಅನಿಷ್ಠ ಪದ್ಥತಿಗಳ ಜಾಗೃತಿ ಮೂಡಿಸೋದೇ ಅವುಗಳ ಜವಾಬ್ದಾರಿ. ಇದಕ್ಕೆ ನೇರ ಹೊಣೆ ಅವರೇ ಎಂದರು.
ಕೊರೊನಾ ತೊಲಗಿಸಲು ನಾಲ್ಕಾರು ಟ್ರ್ಯಾಕ್ಟರ್ಗಳಲ್ಲಿ ಅನ್ನವನ್ನು ತುಂಬಿಕೊಂಡು ಆ ಗ್ರಾಮದ ಸುತ್ತಲೂ ಚೆಲ್ಲೋದು ಅತ್ಯಂತ ಹೇಯ ಕೃತ್ಯವಾಗಿದೆ. ಈ ಮೌಢ್ಯಾಚರಣೆಯಂತಹ ಅನಿಷ್ಠ ಪದ್ಧತಿ ಮಿತಿಮೀರಿ ಹೋದ್ರೆ ನಾವು ಕೈಕಟ್ಟಿ ಕೂರುವುದಿಲ್ಲ. ಇದಕ್ಕೆ ಕಾರಣರಾದವರು ಕಾನೂನಾತ್ಮಕ ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತದೆ ಎಂದರು.