ಬಳ್ಳಾರಿ :ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ರಾಜ್ಯ ಸರ್ಕಾರ ಭಾರೀ ಭ್ರಷ್ಟಾಚಾರ ನಡೆಸಿದೆ. ಇದನ್ನು ಬಯಲಿಗೆಳೆದ ಕಾಂಗ್ರೆಸ್ ನಾಯಕರ ವಿರುದ್ಧವೇ ಲೀಗಲ್ ನೋಟಿಸ್ ನೀಡಿ ಹೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.
ತಪ್ಪು ಮಾಡದಿದ್ದರೆ ಕ್ಲೀನ್‌ಚಿಟ್ ತೆಗೆದುಕೊಂಡು ಸರ್ಕಾರ ಮುಂದುವರಿಸಿ.. ರಾಮಲಿಂಗಾರೆಡ್ಡಿ ಸವಾಲು
ಇಷ್ಟಕ್ಕೂ ಲೀಗಲ್ ನೋಟಿಸ್ ಕೊಡೋದಕ್ಕೆ ಈ ರವಿಕುಮಾರ್ ಯಾರು? ಅವರೊಬ್ಬ ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಅವರಿಂದ ನಮಗೆ ಲೀಗಲ್ ನೋಟಿಸ್ ಕೊಡಿಸಿರೋದು ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹೆಸರಿನಡಿ ಭಾರೀ ಭ್ರಷ್ಟಾಚಾರ ನಡೆದಿದೆ. ಸೂಕ್ತ ತನಿಖೆಗೆ ಆದೇಶ ಹೊರಡಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಆಗ್ರಹಿಸಿದ್ದರು. ಆದರೆ, ಬಿಜೆಪಿ ಸರ್ಕಾರ ಮಾತ್ರ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರಿಂದ ಲೀಗಲ್ ನೋಟಿಸ್ ಜಾರಿಗೊಳಿಸಿ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಹೆದರಿಸಲಿಕ್ಕೆ ಮಂದಾಗಿದೆ. ಆದರೆ, ಇಂತಹ ಬೆದರಿಕೆಗೆ ನಾವ್ ಬಗ್ಗೋದಿಲ್ಲ ಎಂದಿದ್ದಾರೆ.
ಇಷ್ಟಕ್ಕೂ ಲೀಗಲ್ ನೋಟಿಸ್ ಕೊಡೋದಕ್ಕೆ ಈ ರವಿಕುಮಾರ್ ಯಾರು? ಅವರೊಬ್ಬ ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಅವರಿಂದ ನಮಗೆ ಲೀಗಲ್ ನೋಟಿಸ್ ಕೊಡಿಸಿರೋದು ಕೂಡ ಒಂದು ರೀತಿಯ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದರು. ಸಾವಿರಾರು ಕೋಟಿಯ ಭ್ರಷ್ಟಾಚಾರದಲ್ಲಿ ಬಿಜೆಪಿ ಪಕ್ಷದ ಸಿಂಹಪಾಲಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ. ನಾವು ಆರೋಗ್ಯ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳಲ್ಲಿ ನಡೆದ ಭಾರೀ ಭ್ರಷ್ಟಾಚಾರ ಕುರಿತು ಆರೋಪ ಮಾಡಿದ್ದೇವೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಿಂದ ಲೀಗಲ್ ನೋಟಿಸ್ ಯಾಕೆ ನೀಡಿದ್ರು ಅಂತಾ ಗೊತ್ತಾಗಲಿಲ್ಲ. ನೀವು ತಪ್ಪೇ ಮಾಡದಿದ್ದರೆ ತನಿಖೆಗೆ ಒಳಪಡಿಸಿ ಕ್ಲೀನ್‌ಚಿಟ್ ತೆಗೆದುಕೊಂಡು ಸರ್ಕಾರ ಮುಂದುವರಿಸಿ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಸಿಎಂ ಬಿಎಸ್ವೈಗೆ ಸವಾಲು ಹಾಕಿದ್ದಾರೆ.