ಬಳ್ಳಾರಿ: ಕೊರೊನಾ ಸಮಯದಲ್ಲಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ವಿಮ್ಸ್, ಎನ್ಜಿಒ, ಸಂಘ ಸಂಸ್ಥೆಗಳು ಹಾಗೂ ಮಾಧ್ಯಮದ ಮಿತ್ರರು ಉತ್ತಮ ಕೆಲಸ ಮಾಡಿ ನನಗೆ ಸಹಕಾರ ಮಾಡಿದ್ದಾರೆ ಎಂದು ಬಳ್ಳಾರಿ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಬಳ್ಳಾರಿ ಡಿಸಿ ಎಸ್. ಎಸ್. ನಕುಲ್ ಮಾತನಾಡಿ, ಕಳೆದ 19 ತಿಂಗಳಿಂದ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸವನ್ನು ನಿರ್ವಹಿಸಿದ್ದೆನೆ. ಇಂದು ಪವನ್ ಕುಮಾರ್ ಮಲಪಾಟಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದೇನೆ. ನಾನು ಸಹ ಇನ್ನು ಒಂದು ವಾರದೊಳಗೆ ದೆಹಲಿಗೆ ಹೋಗಿ ಅಧಿಕಾರ ಪಡೆಯಲಿರುವೆ ಎಂದು ತಿಳಿಸಿದರು.