ಕರ್ನಾಟಕ

karnataka

ETV Bharat / state

ಹೊಸಪೇಟೆ: ಭೀಕರ ಮಳೆಗೆ ಕುಸಿದ ಮಣ್ಣಿನ ಮನೆಗಳು

ಮನೆಯಲ್ಲಿ ವಾಸಿಸುತ್ತಿದ್ದ ಜನರು ಕೂಡಲೇ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದು, ಇದೀಗ ವಾಸಿಸಲು ಸ್ಥಳವಿಲ್ಲದೆ ಪರದಾಡುವಂತಾಗಿದೆ..

Hospet
ಮಣ್ಣಿನ ಮನೆ ಕುಸಿತ

By

Published : Oct 21, 2020, 6:29 PM IST

ಹೊಸಪೇಟೆ:ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ಸುರಿಯುತ್ತಿರುವ ಭೀಕರ ಮಳೆಗೆ ಮರಿಯಮ್ಮನಹಳ್ಳಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ 5ಕ್ಕೂ ಹೆಚ್ಚು ಮಣ್ಣಿನ ಮನೆಗಳು ಕುಸಿದಿವೆ. ವಾಸಿಸಲು ಸ್ಥಳವಿಲ್ಲದೆ ಸಂತ್ರಸ್ತರು ಪರದಾಡುವಂತಾಗಿದೆ.

ತಾಲೂಕಿನ ಬಲಕುಂದಿ ಗ್ರಾಮದಲ್ಲಿ-2, ಡಣನಾಯಕನ ಕೆರೆ, ದೇವಲಾಪುರ, ಗರಗ ಹಾಗೂ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ತಲಾ ಒಂದು ಮಣ್ಣಿನ ಮನೆಗಳು ಭೀಕರ ಮಳೆಗೆ ಕುಸಿದಿವೆ.

ಮನೆಯಲ್ಲಿ ವಾಸಿಸುತ್ತಿದ್ದ ಜನರು ಕೂಡಲೇ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದು, ಇದೀಗ ವಾಸಿಸಲು ಸ್ಥಳವಿಲ್ಲದೆ ಪರದಾಡುವಂತಾಗಿದೆ.

ಇನ್ನು ಮರಿಯಮ್ಮನಹಳ್ಳಿ ಹೋಬಳಿಯ ತಿಮ್ಲಾಪುರ ಕೆರೆ ಕೋಡಿಬಿದ್ದ ಪರಿಣಾಮ ನೀರಿನ ಹರಿವು ಹೆಚ್ಚಾಗಿದೆ. ನೂರಾರು ಎಕರೆ ಜಮೀನು ಜಲಾವೃತಗೊಂಡಿದೆ.

ABOUT THE AUTHOR

...view details