ಹೊಸಪೇಟೆ: ನಗರಸಭೆಯ 7 ಮಂದಿ ಪೌರ ಕಾರ್ಮಿಕರಿಗೆ ಕೊರೊನಾ ಸೋಂಕು ವಕ್ಕರಿಸಿದ್ದು, ಅವರ ಜೀವನ ನಿರ್ವಹಣೆಗಾಗಿ 10 ಸಾವಿರ ರೂ.ನಗದು ಹಾಗೂ ಆಹಾರ ಸಾಮಗ್ರಿಗಳನ್ನು ನೀಡಬೇಕಂಬ ಕೂಗು ಕೇಳಿ ಬರುತ್ತಿದೆ.
ಕೊರೊನಾಪೀಡಿತ ಪೌರ ಕಾರ್ಮಿಕರ ನೆರವಿಗೆ ಆಗ್ರಹ - ಹೊಸಪೇಟೆ
ಹೊಸಪೇಟೆ ನಗರಸಭೆಯ ಏಳು ಮಂದಿ ಪೌರ ಕಾರ್ಮಿಕರಿಗೆ ಕೊರೊನಾ ಬಾಧಿಸಿದ್ದು, ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಸಹಾಯ ಸಿಗುತ್ತಿಲ್ಲ ಎಂದು ದೂರು ಕೇಳಿಬಂದಿದೆ.
ಪೌರ ಕಾರ್ಮಿಕರು ನಗರದಲ್ಲಿ ಕೊರೊನಾ ವೈರಸ್ ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ. ಈಗ 7 ಮಂದಿ ಪೌರ ಕಾರ್ಮಿಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಪೌರ ಕಾರ್ಮಿಕರನ್ನು ಮಾತಿಗೆ ಮಾತ್ರ ಕೊರೊನಾ ವಾರಿಯರ್ಸ್ಗಳೆಂದು ಕರೆಯಲಾಗುತ್ತಿದೆ. ಕಳೆದ ಎರಡು ತಿಂಗಳಿಂದ ವೇತನ ಸಮಸ್ಯೆಯಾಗಿದೆ. ಕಾರ್ಮಿಕರಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳನ್ನು ವಿತರಿಸುತ್ತಿಲ್ಲ ಎನ್ನಲಾಗಿದೆ.
ಸಮಾನತೆ ಯೂನಿಯನ್ ಕರ್ನಾಟಕದ ಸಂಚಾಲಕ ರಾಮಚಂದ್ರ ಮಾತನಾಡಿ, ಡಿಎಂಎ ಆದೇಶವನ್ನು ನಗರಸಭೆ ಅಧಿಕಾರಿಗಳು ಉಲ್ಲಂಘಿಸಿದ್ದಾರೆ. ನಗರಸಭೆ ನಿಧಿಯನ್ನು ಈ ಸಂದರ್ಭದಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು. ಕೊರೊನಾ ಸೋಂಕಿತ ಪೌರಕಾರ್ಮಿಕರಿಗೆ ಚಿಕಿತ್ಸಾ ವೆಚ್ಚವಾಗಿ ನಗರಸಭೆ ನಿಧಿಯಿಂದ ರೂ.10 ಸಾವಿರ ರೂ. ಮತ್ತು ಒಂದು ತಿಂಗಳಿಗೆ ಆಹಾರ ಸಾಮಗ್ರಿಗಳನ್ನು ನೀಡಬೇಕು. ಪ್ರತಿ ವಾರ ಕೋವಿಡ್ ಟೆಸ್ಟ್ ಮಾಡಿಸಬೇಕು. ಕೋವಿಡ್‌ನಿಂದ ರಕ್ಷಣೆಗೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.