ಬಳ್ಳಾರಿ: ಹಿರಿಯ ಲೇಖಕ ಹಂಪಾ ನಾಗರಾಜಯ್ಯರಿಗೆ ರಾಜ್ಯದ ಗೃಹ ಇಲಾಖೆ ಅಪಮಾನ ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ರಾಜ್ಯ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ಹಿರಿಯ ಲೇಖಕ ಹಂಪಾನಾರನ್ನು ಗೃಹ ಇಲಾಖೆ ಅವಮಾನಿಸಿದೆ : ವಿ.ಎಸ್ ಉಗ್ರಪ್ಪ - ವಿ.ಎಸ್.ಉಗ್ರಪ್ಪ
ಕೇಂದ್ರ ಸರ್ಕಾರದ ಗೌಪ್ಯ ಮಾಹಿತಿ ಸೋರಿಕೆಗೆ ಪಿಎಂ ಮೋದಿ ದುರಾಡಳಿತ ಕಾರಣ. ಆ ಮಾಹಿತಿ ಸೋರಿಕೆಯ ಹಿಂದೆ ಅಡಗಿರುವ ಪತ್ರಕರ್ತನ ವಿರುದ್ಧ ಈವರೆಗೂ ಏಕೆ ಕ್ರಮ ಜರುಗಿಸಲಿಲ್ಲ. ಮಾತೆತ್ತಿದ್ರೆ ದೇಶ ಪ್ರೇಮದ ಬಗ್ಗೆ ಮಾರುದ್ಧ ಭಾಷಣ ಬಿಗಿಯುವ ಆರ್ಎಸ್ಎಸ್ ಮುಖಂಡರು ಯಾಕೆ ಮೌನವಾಗಿದ್ದಾರೆ..
ವಿ.ಎಸ್ ಉಗ್ರಪ್ಪ ಆರೋಪ
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಹಿರಿಯ ಲೇಖಕ ಹಂಪಾನಾರನ್ನು ಗೃಹ ಇಲಾಖೆ ಬಹಳ ತುಚ್ಛವಾಗಿ ನಡೆಸಿಕೊಂಡಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜ್ಯದ ಜನರ ಕ್ಷಮೆಯಾಚಿಸಬೇಕು.
ಕೇಂದ್ರ ಸರ್ಕಾರದ ಗೌಪ್ಯ ಮಾಹಿತಿ ಸೋರಿಕೆಗೆ ಪಿಎಂ ಮೋದಿ ದುರಾಡಳಿತ ಕಾರಣ. ಆ ಮಾಹಿತಿ ಸೋರಿಕೆಯ ಹಿಂದೆ ಅಡಗಿರುವ ಪತ್ರಕರ್ತನ ವಿರುದ್ಧ ಈವರೆಗೂ ಏಕೆ ಕ್ರಮ ಜರುಗಿಸಲಿಲ್ಲ. ಮಾತೆತ್ತಿದ್ರೆ ದೇಶ ಪ್ರೇಮದ ಬಗ್ಗೆ ಮಾರುದ್ಧ ಭಾಷಣ ಬಿಗಿಯುವ ಆರ್ಎಸ್ಎಸ್ ಮುಖಂಡರು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.