ಬಳ್ಳಾರಿ:ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಹೊಲಕ್ಕೆ ನೀರು ನುಗ್ಗಿದ್ದು, ಹತ್ತಿ ಮತ್ತು ತೊಗರಿ, ಮೆಣಸಿನಕಾಯಿ ಸೇರಿದಂತೆ ಅನೇಕ ಬೆಳೆಗಳು ಸಂಪೂರ್ಣ ಮುಳುಗಿ ರೈತರು ಕಂಗಾಲಾಗಿದ್ದಾರೆ.
ಮಹಾಮಳೆಗೆ ಕೊಚ್ಚಿ ಹೋದ ಬೆಳೆ: ಪರಿಹಾರಕ್ಕಾಗಿ ರೈತನ ಮನವಿ
ಜಿಲ್ಲೆಯ ಕುರುಗೋಡು ತಾಲೂಕಿನ ಕೊಳೂರು ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ರೈತ ಸಣ್ಣ ನಾಗಪ್ಪ ಎಂಬುವರಿಗೆ ಸೇರಿದ ಮೆಣಸಿನಕಾಯಿ, ಹತ್ತಿ ಮತ್ತು ತೊಗರಿ ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು ಲಕ್ಷಗಟ್ಟಲೆ ಹಣ ನಷ್ಟವಾಗಿದೆ.
ಬಳ್ಳಾರಿ ಮಳೆ ಸುದ್ದಿ
ಜಿಲ್ಲೆಯ ಕುರುಗೋಡು ತಾಲೂಕಿನ ಕೊಳೂರು ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ರೈತ ಸಣ್ಣ ನಾಗಪ್ಪ ಎಂಬುವರಿಗೆ ಸೇರಿದ ಮೆಣಸಿನಕಾಯಿ, ಹತ್ತಿ ಮತ್ತು ತೊಗರಿ ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, ಲಕ್ಷಗಟ್ಟಲೆ ಹಣ ನಷ್ಟವಾಗಿದೆ.
ನಾಲ್ಕು ಎಕರೆ ಮೆಣಸಿನಕಾಯಿ, ಒಂದು ಎಕರೆ ಹತ್ತಿ ಮತ್ತು ಒಂದು ಎಕರೆ ತೊಗರಿ ಬೆಳೆದಿದ್ದೆ. ಮಳೆ ಬಂದಿದ್ದರಿಂದ ಸಂಪೂರ್ಣ ನೆಲಕಚ್ಚಿದೆ. ದಯವಿಟ್ಟು ಪರಿಹಾರ ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
Last Updated : Sep 28, 2019, 8:39 PM IST