ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ರೈತನ ಹೊಲದಲ್ಲಿ ಮೆಣಸಿನಕಾಯಿ ಬೆಳೆಯ ಮಧ್ಯೆ ಬೆಳೆದಿದ್ದ ಗಾಂಜಾ ಬೆಳೆಯನ್ನ ಸಿರಿಗೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೆಣಸಿನಕಾಯಿ ಬೆಳೆ ಮಧ್ಯೆ ಗಾಂಜಾ... ಪೊಲೀಸರಿಂದ ರೇಡ್ - ಬಳ್ಳಾರಿ ಕ್ರೈಂ
ಮೆಣಸಿನಕಾಯಿ ಬೆಳೆ ಮಧ್ಯೆ ಬೆಳೆಸಿದ್ದ ಗಾಂಜಾ ಬೆಳೆಯನ್ನ ಪೊಲೀಸರು ವಶಕ್ಕೆ ಪಡೆದರು. ಸಿರಿಗೇರಿ ಗ್ರಾಮದಲ್ಲಿ ಈ ಘಟನೆ ನಡೆಯಿತು.
ಗಾಂಜಾ ವಶ
ಸಿರಿಗೇರಿ ಗ್ರಾಮದ ಕೋಲಿ ಈರಣ್ಣ (48) ಅವರ ಹೊಲದಲ್ಲಿ ಗಾಂಜಾ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಸಿರಿಗೇರಿ ಪೊಲೀಸ್ ಠಾಣೆಯ ಪಿಎಸ್ಐ ಅಮರೇಗೌಡ, ಹೆಡ್ಕಾನ್ಸ್ಟೇಬಲ್ ಗಳಾದ ನವೀನ, ಬಸವರಾಜ, ಪಿಸಿಗಳಾದ ಮಲ್ಲಿಕಾರ್ಜುನ, ಮಂಜುನಾಥ, ವಸಂತಕುಮಾರ, ಅಮರೇಶ ನೇತೃತ್ವದ ತಂಡ ದಾಳಿ ಕಾರ್ಯಾಚರಣೆ ನಡೆಸಿತು.
ಅಂದಾಜು 8 ಕೆ.ಜಿ. 300 ಗ್ರಾಂನಷ್ಟು ಗಾಂಜಾ ಗಿಡಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಕ್ರಮ ಗಾಂಜಾ ಬೆಳೆದ ಆರೋಪದಡಿ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.