ಕರ್ನಾಟಕ

karnataka

ETV Bharat / state

ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ - ಬಳ್ಳಾರಿ ಜಿಲ್ಲೆಯ ಸಿರುಗುಪ್ಪತಾಲೂಕು ರಾರಾವಿ ಗ್ರಾಮ

ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಜಿಗುಪ್ಸೆಗೊಂಡ ಪತಿ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆಗೆ ಶರಣಾದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪತಾಲೂಕು ರಾರಾವಿ ಗ್ರಾಮದಲ್ಲಿ ನಡೆದಿದೆ.

Wifes abusive relationship  husband commits suicide casual film
ಪತ್ನಿಯ ಆಕ್ರಮ ಸಂಬಂಧ ಬೇಸತ್ತು ಪತಿ ಆತ್ಮಹತ್ಯೆ ಸಾಂದರ್ಭಿಕ ಚಿತ್ರ

By

Published : Nov 5, 2022, 2:34 PM IST

ಬಳ್ಳಾರಿ: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಜಿಗುಪ್ಸೆಗೊಂಡ ಪತಿ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪತಾಲೂಕಿನ ರಾರಾವಿ ಗ್ರಾಮದಲ್ಲಿ ನಡೆದಿದೆ. ರಾರಾವಿ ಗ್ರಾಮದ ದೊಡ್ಡ ನಾಗೇಂದ್ರ (32) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಅಕ್ರಮ ಸಂಬಂಧ :ರಾರಾವಿ ಗ್ರಾಮದ ದೊಡ್ಡ ನಾಗೇಂದ್ರ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಲವಾರು ದಿನಗಳಿಂದ ಪರ ಪುರುಷನೊಂದಿಗೆ ಪತ್ನಿಯು ಅಕ್ರಮ ಸಂಬಂಧವಿರುವ ಬಗ್ಗೆ ದೊಡ್ಡ ನಾಗೇಂದ್ರನಿಗೆ ಸಂಶಯವಿತ್ತು. ಇದರಿಂದ ಈತನು ಮಾನಸಿಕದಿಂದ ಬಳಲುತ್ತಿದ್ದನು. ಅಷ್ಟೇ ಅಲ್ಲದೇ ದೊಡ್ಡ ನಾಗೇಂದ್ರನಿಗೆ ಪತ್ನಿ ಅಕ್ರಮ ಸಂಬಂಧ ಹೊರ ಬಂದ್ರೆ ಮಾರ್ಯಾದೆ ಹಾಳಾಗುತ್ತದೆ ಎಂಬ ಭಯ ಕಾಡುತ್ತಿತ್ತು. ಇದರಿಂದ ಜೀವನದಲ್ಲಿ ಜುಗುಪ್ಗೆಗೊಂಡು ಪಕ್ಕದ ಮನೆಯ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದೂರು ದಾಖಲು:ಆತನ ಸಹೋದರ ಸಣ್ಣನಾಗೇಂದ್ರನು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ ಎಂದು ಪಿ.ಎಸ್.ಐ. ರಂಗಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ:ಓವರ್​ಟೇಕ್ ಮಾಡುವಾಗ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ: ಬೆಂಗಳೂರಲ್ಲಿ ಬೈಕ್​​ ಸವಾರ ಸಾವು


ABOUT THE AUTHOR

...view details