ಬಳ್ಳಾರಿ: ಲಾಕ್ಡೌನ್ ಸಮಯದಲ್ಲಿ ಸುಮ್ಮನೆ ಸಮಯ ವ್ಯರ್ಥ ಮಾಡದೆ ನೈಸರ್ಗಿಕ ಒಣ ಬಾಳೆ ಹಣ್ಣು ತಯಾರು ಮಾಡಿ ಸೈ ಎನಿಸಿಕೊಂಡ ರೈತನ ಕತೆ ಇದು..
ವಾಟ್ ಆ್ಯನ್ ಐಡಿಯಾ ಸರ್‌ಜೀ.. ನೈಸರ್ಗಿಕ ಒಣಗಿದ ಬಾಳೆಹಣ್ಣು ಉತ್ಪನ್ನ ತಯಾರಿಸಿದ ರೈತ!! - ಕೊರೊನಾ ವೈರಸ್ ಲಾಕ್ಡೌನ್
ಕೊರೊನಾ ಲಾಕ್ಡೌನ್ ಸಮಯದಲ್ಲಿ ರೈತನೊಬ್ಬ ಸ್ವತಃ ತಾನೇ ಡ್ರೈ ಬಾಳೆಹಣ್ಣಿನ ಉತ್ಪನ್ನ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ..
ಜಿಲ್ಲೆಯ ಕಂಪ್ಲಿ ತಾಲೂಕಿನ ರಾಮಸಾಗರದ ಸುಗಂಧಿ ಬಾಳೆ ಬೆಳೆದ ರೈತ ಕೆ.ಗಂಗಾಧರ್ ಎಂಬುವರು ಸ್ವತಂ ತಾವೇ ತಯಾರಿಸಿದ ಒಣ ಬಾಳೆಹಣ್ಣಿನ ಉತ್ಪನ್ನವನ್ನು ಎಪಿಎಂಸಿ ಆವರಣದಲ್ಲಿ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಲಾಕ್ಡೌನ್ ಸಮಯದಲ್ಲಿ ಸುಗಂಧಿ ಬೆಳೆದ ನನಗೆ ಮಾರುಕಟ್ಟೆ ಬೆಂಬಲ ಬೆಲೆ ಸಿಗಲಿಲ್ಲ. ಇದರಿಂದ ಬಹಳ ನಷ್ಟವಾಗಿತ್ತು. ಹಾಗಾಗಿ ಪ್ರಗತಿಪರ ರೈತರೊಬ್ಬ ಸಲಹೆಯಂತೆ ತೋಟದಲ್ಲಿ ಪೂರ್ಣ ಹಣ್ಣಾದ ಬಾಳೆಯನ್ನು ನೈಸರ್ಗಿಕವಾಗಿ ಒಣಗಿಸಿ ನಂತರ ಸಂಸ್ಕರಿಸಿ ಪ್ಯಾಕಿಂಗ್ ಮಾಡಿ, ಜಿಲ್ಲೆಯ ಹಲವು ಸಗಟು ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಮಾಡಿದೆ ಎಂದು ತಿಳಿಸಿದರು.
ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಪ್ರಾಯೋಗಾಲಯ ಹಾಲಿ ಉತ್ಪನ್ನ ಬಳಕೆಗೆ ಯೋಗ್ಯವಾಗಿದೆ ಎಂದು ವರದಿ ನೀಡಿದೆ. ಈ ಸಮಯದಲ್ಲಿ ಸರ್ಕಾರವು ಡ್ರೈ ಬಾಳೆ ಉತ್ಪಾದನೆಗೆ ಅಗತ್ಯ ಆರ್ಥಿಕ ನೆರವು ನೀಡಬೇಕು ಎಂದು ರೈತ ಗಂಗಾಧರ್ ಮನವಿ ಮಾಡಿದರು.