ಕರ್ನಾಟಕ

karnataka

ETV Bharat / state

ಪೊಲೀಸ್​ ಅಧಿಕಾರಿ ಹೆಸರಲ್ಲಿ ನಕಲಿ ಫೇಸ್​​ಬುಕ್ ಖಾತೆ: ಹಣ ವಸೂಲಿಗೆ ಯತ್ನಿಸಿದ ಸೈಬರ್ ಖದೀಮರು! - Kaul Bazar Police Station, Bellary

ಪೊಲೀಸ್​ ಅಧಿಕಾರಿ ಹೆಸರಲ್ಲಿ ನಕಲಿ ಫೇಸ್​​ಬುಕ್​ ಖಾತೆ ಸೃಷ್ಟಿಸಿ ಖದೀಮರು ಹಣ ವಸೂಲಿಗೆ ಇಳಿದಿದ್ದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

dss
ಪೊಲೀಸ್​ ಅಧಿಕಾರಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ

By

Published : Sep 2, 2020, 12:47 PM IST

ಬಳ್ಳಾರಿ: ಪೊಲೀಸ್​ ಅಧಿಕಾರಿಯ ಹೆಸರಿನಲ್ಲಿ ನಕಲಿ ಫೇಸ್​​ಬುಕ್ ಖಾತೆ ತೆಗೆದು ಸೈಬರ್ ಖದೀಮರು ವಸೂಲಿಗೆ ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸ್​ ಅಧಿಕಾರಿ ಹೆಸರಲ್ಲಿ ನಕಲಿ ಫೇಸ್​​ಬುಕ್ ಖಾತೆ

ನಗರದ ಕೌಲ್ ಬಜಾರ್ ಪೊಲೀಸ್​ ಠಾಣೆಯ ಸಿಪಿಐ ಸುಭಾಷಚಂದ್ರ ಹೆಸರಿನಡಿ ನಕಲಿ ಖಾತೆ ಸೃಷ್ಟಿಸಿ ಫೇಸ್​​ಬುಕ್​ನಲ್ಲಿಯೇ ಪರಿಚಯಸ್ಥರಿಂದ ಹಣ ಕೀಳಲು ಖದೀಮರು ಮುಂದಾಗಿದ್ದಾರೆ. ಪೊಲೀಸ್ ಸಮವಸ್ತ್ರ ಧರಸಿಕೊಂಡಿರುವ ಅನಾಮಧೇಯ ವ್ಯಕ್ತಿಯೋರ್ವ ಫೋಟೋ ಹಾಕಿ ನಕಲಿ ಖಾತೆ ಸೃಷ್ಟಿಸಿದ್ದಾನೆ. ಹಿಂದಿಯಲ್ಲಿ ಸಂಭಾಷಣೆ ನಡೆಸಿ ಹಣ ಕೀಳುತ್ತಿದ್ದ ಎನ್ನಲಾಗಿದೆ.

ಕೌಲ್ ಬಜಾರ್ ಸಿಪಿಐ ಸುಭಾಷಚಂದ್ರ ಆಪ್ತರೊಬ್ಬರಿಗೆ ಕರೆ ಮಾಡಿದ ಅನಾಮಧೇಯ ವ್ಯಕ್ತಿಯೊಬ್ಬ ಹಣ ನೀಡುವಂತೆ ಕೇಳಿದ್ದಾನೆ. ನಿನಗ್ಯಾಕೆ ಹಣ ನೀಡಬೇಕು ಅಂತ ಕೇಳಿದಾಗಲೇ ಈ ವಿಷಯ ಬಹಿರಂಗಗೊಂಡಿದೆ. ಕೂಡಲೇ ಎಚ್ಚೆತ್ತ ಸಿಪಿಐ ಸುಭಾಷ ಚಂದ್ರ, ನಕಲಿ ಫೇಸ್​​ಬುಕ್ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ.

ABOUT THE AUTHOR

...view details