ಹೊಸಪೇಟೆ:ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡ ಸುಮಾರು 460 ಲೀಟರ್ ಬೆಲ್ಲದ ಕೊಳೆ, 65 ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು ಒಂದು ಮೊಬೈಲ್ ವಶಪಡಿಸಿಕೊಂಡಿದೆ.
ಇನ್ನು ಈ ಅಡ್ಡೆ ಕಂಪ್ಲಿ ಪಟ್ಟಣದ ಶಿಕಾರಿಹಟ್ಟಿಯ ನಾಗೇಶ್ ಮತ್ತು ಸುರೇಶ್ ಎಂಬವರಿಗೆ ಸೇರಿದ್ದು ಎನ್ನಲಾಗಿದೆ.
ಇಲ್ಲಿನ ಸಣ್ಣಾಪುರ ರಸ್ತೆಯಲ್ಲಿರುವ ಸ್ಮಶಾನದ ಕಾಂಪೌಂಡ್ ಆವರಣ ಹಾಗೂ ಅವರ ಮನೆಗಳ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು, ಕಳ್ಳಭಟ್ಟಿ ಸಾರಾಯಿ, ಬೆಲ್ಲದ ಕೊಳೆ ಇನ್ನಿತರ ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಟ್ಟು ವಶಪಡಿಸಿಕೊಂಡು ವಸ್ತುಗಳ ಅಂದಾಜು ಮೌಲ್ಯ ರೂ. 35 ಸಾವಿರಗಳಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.