ಕರ್ನಾಟಕ

karnataka

ETV Bharat / state

371 ಜೆ ಕುರಿತು ದೇವೇಂದ್ರಪ್ಪ, ರಾಮುಲು ಇಬ್ಬರಿಗೂ ಗೊತ್ತಿಲ್ಲ: ಸಿದ್ದರಾಮಯ್ಯ ವ್ಯಂಗ್ಯ - news kannada

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ನಾಯಕರಿಗೆ ವಿಶೇಷ ಸ್ಥಾನಮಾನ ಅಂತ ಅಂದ್ರೆ ಏನಾದ್ರೂ ಗೊತ್ತಾ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

By

Published : Apr 19, 2019, 6:08 PM IST

ಬಳ್ಳಾರಿ: ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನ ಅಲಂಕರಿಸಿ ಯಾರು ಮಾಜಿಯಾಗಿದ್ದಾರೋ ಇವತ್ತು ಅವರು ಪ್ರಧಾನಿ ನರೇಂದ್ರ ಮೋದಿಯ ಜಪ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ಎಸ್.ಎಂ. ಕೃಷ್ಣ ವಿರುದ್ಧ ಹರಿಹಾಯ್ದಿದ್ದಾರೆ.

ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ನಿನ್ನೆ ನಡೆದ ಬಹಿರಂಗ ಸಭೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಉಗ್ರಪ್ಪನವರ ಪರವಾಗಿ ಪ್ರಚಾರದಲ್ಲಿ ಅವರು ಮಾತನಾಡಿದರು. ನಮ್ಮ ಪಕ್ಷದಲ್ಲೇ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಈ ದಿನ ಪ್ರಧಾನಿ ನರೇಂದ್ರ ಮೋದಿಯವರ ಜಪ‌ ಮಾಡುತ್ತಿದ್ದಾರೆ. ಈ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸಿಕೊಡುವ ಸಲುವಾಗಿ ಸಂವಿಧಾನದ 371(ಜೆ) ಕಲಂ ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಆಗ ಹೋರಾಟದ ಮುಂಚೂಣಿಯಲ್ಲಿದ್ದವರು.ಕಲಬುರಗಿಯಲ್ಲಿ ರಾಹುಲ್ ಗಾಂಧಿಯವರ ಮೇಲೆ ಈ ಕುರಿತಾಗಿ ಒತ್ತಡ ಹೇರಿದಾಗ, ಕೂಡಲೇ ಅಂದಿನ ಪ್ರಧಾನಿಯಾಗಿದ್ದ ಮನಮೋಹನಸಿಂಗ್ ಅವರ ಗಮನಕ್ಕೆ ತಂದಿದ್ದರು. ಅದರ ಅನುಮೋದನೆಗೆ ಉಪ ಪ್ರಧಾನಿಯವರತ್ತ ತೆರಳಿದಾಗ, ಲಾಲ್ ಕೃಷ್ಣ ಅಡ್ವಾಣಿಯವರು ವಿಶೇಷ ಸ್ಥಾನಮಾನ ಕಲ್ಪಿಸಲು ನಿರಾಕರಿಸಿದ್ದರು. ಆಗ ನಮ್ಮ ಪಕ್ಷದ ನಾಯಕರ ಪ್ರಬಲ ಹೋರಾಟದ ಫಲವಾಗಿ ವಿಶೇಷ ಸ್ಥಾನಮಾನ‌ ದೊರಕುವಂತಾಯಿತು ಎಂದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಅಂದು ನಮ್ಮ ಪಕ್ಷದ ಮುಖ್ಯಮಂತ್ರಿಯಾಗಿದ್ದವರು. ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನ ಜಪಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿದ್ದವರಿಗೆ ಮೋದಿಯವರ ಜಪದ ಅನಿವಾರ್ಯತೆ ಇದೆಯೇ ಎಂದು ಪ್ರಶ್ನಿಸಿದರು.

ವಿಶೇಷ ಸ್ಥಾನಮಾನ ಅಂದ್ರೆ ಅವರಿಗೇನಾದ್ರೂ ಗೊತ್ತಾ?

ಶಾಸಕ ಶ್ರೀರಾಮುಲುಗೇ ವಿಶೇಷ ಸ್ಥಾನಮಾನ ಅಂದ್ರೇನೆ ಗೊತ್ತಿಲ್ಲ. ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ವೈ.ದೇವೇಂದ್ರಪ್ಪನವರು ನಮ್ಮ ಪಕ್ಷದಿಂದ ಜಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ದೇವೇಂದ್ರಪ್ಪ ಲೋಕಸಭಾ ಚುನಾವಣೆಯ ಟಿಕೆಟ್ ಅಕಾಂಕ್ಷಿಯಾಗಿದ್ದರು. ಟಿಕೆಟ್​​​ಗಾಗಿ ಅವರು ನನ್ನ ಹತ್ತಿರನೂ ಬಂದಿದ್ದರು. ಆಗ ನಾನು ಯಾವುದಾದರೂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ, ಅಲ್ಲಿಯವರೆಗೆ ಸುಮ್ಮನಿರು ಅಂತಾ ಹೇಳಿ‌ ಕಳಿಸಿದ್ದೆ. ದೇವೇಂದ್ರಪ್ಪ ಮನಿ ಮೈಂಡೆಂಡ್​ ಹಾಗಾಗಿ, ಈಗ ಶಾಸಕ ಶ್ರೀರಾಮಲು ಅವರನ್ನು ಹರಕೆಯ ಕುರಿ ಮಾಡಿ ಬಿಟ್ಟಿದ್ದಾನೆ. ಆ ದೇವೇಂದ್ರಪ್ಪಗೆ ವಿಶೇಷ ಸ್ಥಾನಮಾನ ಅಂದ್ರೆ ಏನಂತಾನೆ ಗೊತ್ತಿಲ್ಲ. ರಾಮುಲುಗೇನೇ ಗೊತ್ತಿಲ್ಲ. ಇನ್ನೂ ಈ ದೇವೇಂದ್ರಪ್ಪಗೆ ಎಲ್ಲಿಂದ ಗೊತ್ತಾಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.

ABOUT THE AUTHOR

...view details