ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ನಿಂದ ಇಡೀ ದೇಶವೇ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದಲ್ಲಿನ ಖರಾಬು ಹಾಡನ್ನ ತಮ್ಮ ಮೊಬೈಲ್ನಲ್ಲೇ ಬಿಡುಗಡೆ ಮಾಡಿ ಗಣಿನಗರಿಯ ಧ್ರುವ ಸರ್ಜಾ ಅಭಿಮಾನಿಯೊಬ್ಬರು ಸಂಭ್ರಮಿಸಿದ್ರು.
ಪೊಗರು ಸಿನಿಮಾದ ಖರಾಬು ಹಾಡು ಬಿಡುಗಡೆಗೊಳಿಸಿ ಸಂಭ್ರಮಿಸಿದ ಗಣಿನಗರಿಯ ಧ್ರುವ ಸರ್ಜಾ ಅಭಿಮಾನಿ! - dhruva sarja fan realeases his song
ಧ್ರುವ ಸರ್ಜಾ ಅಭಿಮಾನಿ ಬಳಗದ ಯುವ ಮುಖಂಡ ಎಂ.ಜಿ.ಕನಕ ಅವರು, ತಮ್ಮ ಅಭಿಮಾನಿ ಬಳಗದೊಂದಿಗೆ ಪೊಗರು ಚಿತ್ರದಲ್ಲಿ ಬರುವ ಖರಾಬು ಹಾಡನ್ನ ಮೊಬೈಲ್ನಲ್ಲಿಯೇ ಬಿಡುಗಡೆ ಗೊಳಿಸಿದ್ರು
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿ ಬಳಗದ ಯುವ ಮುಖಂಡ ಎಂ.ಜಿ.ಕನಕ ಅವರು, ತಮ್ಮ ಅಭಿಮಾನಿ ಬಳಗದೊಂದಿಗೆ ತಮ್ಮ ಮನೆಯಲ್ಲಿಯೇ ಮೊಬೈಲ್ನಲ್ಲಿ ಪೊಗರು ಚಿತ್ರದಲ್ಲಿ ಬರುವ ಖರಾಬು ಹಾಡನ್ನ ಬಿಡುಗಡೆ ಗೊಳಿಸಿದ್ರು. ಅಲ್ಲದೇ, ಆ ಹಾಡಿನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎಂಟ್ರಿ ಕೊಡುತ್ತಿದ್ದಂತೆಯೇ ಹೂವಿನ ಮಳೆಯನ್ನೇ ಸುರಿಸಿ ಸಂಭ್ರಮಿಸಿದ್ರು.
ಕೊರೊನಾ ಮಹಾಮಾರಿಯಿಂದಾಗಿ ಸಿನಿಮಾ ಮಂದಿರದಲ್ಲಿ ಈ ಹಾಡನ್ನ ಬಿಡುಗಡೆಗೊಳಿಸಲಾಗದ ಕಾರಣ, ಮನೆಯೊಳಗೆ ಇದ್ದುಕೊಂಡೇ ನಾನು ಹಾಡನ್ನ ಬಿಡುಗಡೆ ಮಾಡಿ, ತಮ್ಮ ಗೆಳೆಯರ ಬಳಗಕ್ಕೂ ಕೂಡ ಹಾಡನ್ನ ಪ್ರದರ್ಶಿಸಿರುವೆ ಎಂದು ಧ್ರುವ ಸರ್ಜಾ ಅಭಿಮಾನಿ ಎಂ.ಜಿ.ಕನಕ ತಿಳಿಸಿದ್ರು. ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡೇ ಈ ಹಾಡನ್ನ ಬಿಡುಗಡೆ ಮಾಡಲಾಯಿತು ಎಂದ್ರು.