ಬಳ್ಳಾರಿ:ರಾಜ್ಯದಲ್ಲಿ ನೆರೆಯಿಂದ ಹಾಳಾಗಿರುವ ಪ್ರದೇಶಗಳನ್ನು ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದರು.
ಪ್ರವಾಹ ಪೀಡಿತ ಪ್ರದೇಶಗಳನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ : ಪ್ರತಿಭಟನಾಕಾರರ ಆಗ್ರಹ
ರಾಜ್ಯದಲ್ಲಿ ನೆರೆಯಿಂದ ಹಾಳಾಗಿರುವ ಪ್ರದೇಶಗಳನ್ನು ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದರು. ಜೊತೆಗೆ ಆಗಿರುವ ಹಾನಿಗೆ ಪರಿಹಾರ ಧನವನ್ನು ನೀಡಿ ಎಂದು ಕೇಳಿಕೊಂಡರು.
ಪ್ರತಿಭಟನೆ ನಡೆಸಿ ಮಾತನಾಡಿದ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಜಿ.ಕಾರ್ತಿಕ್, 17ಜಿಲ್ಲೆಯಲ್ಲಿ ಭೀಕರ ಪ್ರವಾಹದಿಂದ ಅಪಾರ ಪ್ರಮಾಣದ ಆಸ್ತಿ ಸರ್ವನಾಶವಾಗಿದೆ, ಜನರು ಮತ್ತು ಪ್ರಾಣಿಗಳು ಮತಪಟ್ಟಿವೆ, ರೈತರ ಒಂದು ಲಕ್ಷ ಕೋಟಿ ರೂ.ಬೆಳೆ ನಾಶವಾಗಿದೆ ಅದಕ್ಕೆ ತಕ್ಕ ಪರಿಹಾರ ಧನವನ್ನು ನೀಡಿ ಸಹಕರಿಸಿ ಎಂದು ಕೇಳಿಕೊಂಡರು.
ನೆರೆ ಸಂತ್ರಸ್ತರಿಗೆ ಪರಿಹಾರ ಹಾಗೂ ಪುರ್ನವಸತಿ ನಿರ್ಮಾಣ ಮಾಡಿಕೊಡಬೇಕು ಮತ್ತು ರೈತರ ಸಾಲ ಮನ್ನಾ ಮಾಡಬೇಕು. ಕುಡಿಯುವ ನೀರು ಹಾಗೂ ಕೃಷಿಯ ಅನುಕೂಲಕ್ಕಾಗಿ ಜಿಲ್ಲೆಯಲ್ಲಿರುವ ಕೆರೆಗಳ ಹೂಳು ಎತ್ತಿಸಿ, ನೀರು ತುಂಬಿಸುವ ಕಾರ್ಯ ನಡೆಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲೆಯ ಕಾರ್ಯಾಧ್ಯಕ್ಷ ಪಿ.ನಾರಾಯಣ ರೆಡ್ಡಿ, ಉಪಾಧ್ಯಕ್ಷ ವಿ.ಟಿ.ನಾಗರಾಜ, ಕಾರ್ಯದರ್ಶಿ ಬಿ.ವಿ.ಗೌಡ, ರೇವಣ್ಣ ಸಿದ್ದಪ್ಪ, ರುದ್ರಪ್ಪ, ನಾಗೇಶ್ ಭಾಗವಹಿಸಿದ್ದರು.