ಹೊಸಪೇಟೆ (ವಿಜಯನಗದ): ಜಿಲ್ಲೆಯ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಒಂದೇ ವಾರದಲ್ಲಿ 6 ಮಂದಿ ಉಸಿರಾಟ ಸಮಸ್ಯೆಗೆ ಬಲಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಜನರಲ್ಲಿ ಆತಂಕ ಸೃಷ್ಟಿಸಿದ ಸರಣಿ ಸಾವು.. ಒಂದೇ ದಿನ ಪತಿ-ಪತ್ನಿ ಬಲಿ - ವಿಜಯನಗರ ಸುದ್ದಿ
ಕಳೆದೊಂದು ವಾರದಿಂದ ಗ್ರಾಮದಲ್ಲಿ ಸರಣಿ ಸಾವುಗಳು ಸಂಭವಿಸುತ್ತಿವೆ. ಇಂದು ಪತಿ-ಪತ್ನಿ ಇಬ್ಬರೂ ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ತಂದೆ-ತಾಯಿ ಒಂದೇ ದಿನ ಬಲಿಯಾಗಿದ್ದು, ಪುತ್ರ ಮಾಂತೇಶ್ ಕಂಗಾಲಾಗಿದ್ದಾರೆ..
ಜನರಲ್ಲಿ ಆತಂಕ ಸೃಷ್ಟಿಸಿದ ಸರಣಿ ಸಾವು
ಕಳೆದೊಂದು ವಾರದಿಂದ ಗ್ರಾಮದಲ್ಲಿ ಸರಣಿ ಸಾವುಗಳು ಸಂಭವಿಸುತ್ತಿದ್ದು, ಇಂದು ಪತಿ-ಪತ್ನಿ ಇಬ್ಬರೂ ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ತಂದೆ-ತಾಯಿ ಒಂದೇ ದಿನ ಬಲಿಯಾಗಿದ್ದು, ಪುತ್ರ ಮಾಂತೇಶ್ ಕಂಗಾಲಾಗಿದ್ದಾರೆ.
ತಂದೆ ನಾಕ್ಯಾ ನಾಯ್ಕ(63), ತಾಯಿ ಸೀತಾಬಾಯಿ ನಾಯ್ಕ್ (58) ಒಂದೇ ದಿನ ಸಾವಿಗೀಡಾದ ದುರ್ದೈವಿಗಳಾಗಿದ್ದಾರೆ. ಗ್ರಾಮದಲ್ಲಿ 6 ಮಂದಿ ಉಸಿರಾಟದ ತೊಂದರೆ, ಇತರೆ ಕಾಯಿಲೆಗಳಿಂದ ಸಾವನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.