ಬಳ್ಳಾರಿ: ಗಣಿನಗರಿ ಬಳ್ಳಾರಿಯಲ್ಲಿಂದು ಮದ್ಯವ್ಯಸನಿ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.
ವ್ಯಕ್ತಿ ಅನುಮಾನಾಸ್ಪದ ಸಾವು: ಮೃತದೇಹ ಎತ್ತಿ ಮಾನವೀಯತೆ ಮೆರೆದ ಪೊಲೀಸರು! - bellary latest crime news
ಅನುಮಾನಸ್ಪದವಾಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಮೃತದೇಹ ಎತ್ತಲು ಯಾರೂ ಮುಂದೆ ಬಾರದ ಕಾರಣ ಪೊಲೀಸರೇ ಮೃತದೇಹ ಸಾಗಿಸಿದ್ದಾರೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಹೋಬಳಿಯ ನಿವಾಸಿ ಶಶಿಧರ (40) ಮೃತಪಟ್ಟ ವ್ಯಕ್ತಿಯೆಂದು ಗುರುತಿಸಲಾಗಿದೆ. ಯುಗಾದಿ ಹಬ್ಬಕ್ಕೆಂದು ಬಂದಿದ್ದ ಈತನು ನಗರದ ತಾಳೂರು ರಸ್ತೆಯಲ್ಲಿನ ಸಂಬಂಧಿಕರ ಮನೆಯಲಿ ನೆಲೆಸಿದ್ದ. ಮದ್ಯದ ದಾಸನಾಗಿದ್ದ ಈತನು ಕಳೆದ ಮುರ್ನಾಲ್ಕು ದಿನಗಳ ಹಿಂದೆಯಷ್ಟೇ ಮದ್ಯ ಸೇವಿಸಲು ಮದ್ಯದ ಅಂಗಡಿಗಳನ್ನ ಹುಡುಕಾಟ ನಡೆಸುತ್ತಿದ್ದ. ಈತನನ್ನು ವಿಚಾರಿಸಿದ ಪೊಲೀಸರು ನೀರಡಿಕೆಯಾಗಿದೆ ಎಂದಾಗ, ತಮ್ಮ ಬೈಕಿನಲ್ಲಿದ್ದ ವಾಟರ್ ಬಾಟಲ್ ಅನ್ನು ನೀಡಿದ್ದಾರೆ. ಅದನ್ನ ಕುಡಿದು ತನ್ನ ಬಾಯಾರಿಕೆ ನೀಗಿಸಿಕೊಂಡಿದ್ದಾನೆ. ನಂತರ ಪೊಲೀಸರೇ ಗದರಿಸಿ ಮನೆಗೆ ಹೋಗುವಂತೆ ಸೂಚನೆ ನೀಡಿದ್ದರು. ಆದರೆ, ಮನೆಗೆ ತೆರಳದೇ ಕನಕ ದುರ್ಗಮ್ಮ ದೇಗುಲದ ಆವರಣದಲ್ಲಿ ನೆಲೆಸಿದ್ದ.
ಈತನ ಮುಖದ ಮೇಲೆ ಗಾಯಗಳಿದ್ದು, ಈತನ ಸಾವು ನಿಗೂಢವಾಗಿದೆ. ಮೃತದೇಹ ಎತ್ತಲು ಯಾರೂ ಮುಂದಾಗದಿದ್ದಾಗ ಪೊಲೀಸರೇ ಮೃತದೇಹ ಎತ್ತಿದ್ದಾರೆ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.