ಬಳ್ಳಾರಿ:ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದಮ್ಮೂರು ಶೇಖರ್ ಅವರು ಮುಂದುವರೆಯಲಿದ್ದು, ಕೆ.ಎ.ರಾಮಲಿಂಗಪ್ಪ ಅವರನ್ನ ವಾಡಾ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬುಡಾ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ದಮ್ಮೂರು ಶೇಖರ್
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದಮ್ಮೂರು ಶೇಖರ್ ಅವರು ಮುಂದುವರೆಯಲಿದ್ದಾರೆ.
ಬುಡಾ ಅಧ್ಯಕ್ಷ
ಬುಡಾ ಅಧ್ಯಕ್ಷರಾಗಿದ್ದ ಬಿಜೆಪಿಯ ಹಿರಿಯ ಕೆ.ಎ.ರಾಮಲಿಂಗಪ್ಪ ಅವರು, ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಹಾಲಿ ಬುಡಾ ಅಧ್ಯಕ್ಷರಾಗಿದ್ದ ದಮ್ಮೂರು ಶೇಖರ್ ಅವರು, ಮಾಜಿ ಸಚಿವ ಗಾಲಿ ಜನಾರ್ದರೆಡ್ಡಿಯವರ ಆಪ್ತರಾಗಿದ್ದಾರೆ.
ಕೇವಲ 48 ಗಂಟೆಗಳಲ್ಲೇ ತನ್ನ ನಿಲುವನ್ನ ಬದಲಿಸಿದ ರಾಜ್ಯ ಸರ್ಕಾರ ಬುಡಾ ಅಧ್ಯಕ್ಷರನ್ನಾಗಿ ದಮ್ಮೂರು ಶೇಖರ್ ಅವರನ್ನ ಮುಂದುವರೆಸಿ, ವಾಡಾ ಅಧ್ಯಕ್ಷರನ್ನಾಗಿ ಹಿರಿಯ ಮುಖಂಡ ಕೆ.ಎ.ರಾಮಲಿಂಗಪ್ಪ ಅವರನ್ನ ನೇಮಿಸಿದೆ.