ಬಳ್ಳಾರಿ: ನಗರದ ರೇಡಿಯೋ ಪಾರ್ಕ್‌ನ 2ನೇ ರೈಲ್ವೆ ಗೇಟ್ ಹತ್ತಿರದ ಆಟೋ ನಿಲ್ದಾಣ ಮುಂದೆ ಮೊಸಳೆ ಪ್ರತ್ಯಕ್ಷವಾಗಿದೆ. ಪ್ರತಿನಿತ್ಯ ಈ ಪ್ರದೇಶದಲ್ಲಿ ಸಾರ್ವಜನಿಕರು ಓಡಾಡುತ್ತಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಬಳ್ಳಾರಿಯ ರೇಡಿಯೋ ಪಾರ್ಕ್‌ನ 2ನೇ ರೈಲ್ವೆ ಗೇಟ್ ಬಳಿ ಮೊಸಳೆ ಪ್ರತ್ಯಕ್ಷ - ಬಳ್ಳಾರಿ
ಬಳ್ಳಾರಿ ನಗರದ ರೇಡಿಯೋ ಪಾರ್ಕ್‌ನ 2ನೇ ರೈಲ್ವೆ ಗೇಟ್ ಹತ್ತಿರದ ಆಟೋ ನಿಲ್ದಾಣ ಮುಂದೆ ಮೊಸಳೆ ಪ್ರತ್ಯಕ್ಷವಾಗಿದೆ. ನಿನ್ನೆ ರಾತ್ರಿ ಸುರಿದ ಮಳೆಯಲ್ಲಿ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಬಳ್ಳಾರಿಯ ರೇಡಿಯೋ ಪಾರ್ಕ್‌ನ 2ನೇ ರೈಲ್ವೆ ಗೇಟ್ ಬಳಿ ಮೊಸಳೆ ಪ್ರತ್ಯಕ್ಷ..
ನಿನ್ನೆ ರಾತ್ರಿ ಸುರಿದ ಮಳೆಯಲ್ಲಿ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಕೆಲವು ತಿಂಗಳ ಹಿಂದೆ ನಾಗಲಕೆರೆಯಲ್ಲಿನ ಮೊಸಳೆಯೊಂದು ನಾಗಲಕೆರೆಯ ಹತ್ತಿರ ಜನರು ವಾಸಿಸುವ ಪ್ರದೇಶದ ಬಳಿ ಬಂದಿತ್ತು. ಅದನ್ನು ಅರಣ್ಯ ಇಲಾಖೆಯವರು ಹಿಡಿದು ಕಿರು ಮೃಗಾಲಕ್ಕೆ ಬಿಟ್ಟಿದ್ದರು.
2ನೇ ರೈಲ್ವೆ ಗೇಟ್ಗೆ ನಾಗಲಕೆರೆಗೆ ಅರ್ಧ ಕಿ.ಮೀ. ಇದೆ. ಈ ಮೊಸಳೆ ಕೂಡ ನಾಗಲಕೆರೆಯಿಂದ ಬಂದಿರಬಹುದು ಎಂದು ಜನರು ಮಾತನಾಡುತ್ತಿದ್ದಾರೆ.