ಹೊಸಪೇಟೆ : ರೈತರ ಸಮಸ್ಯೆಗಳಿಗೆ ಪರಿಹಾರ ನೀಡದಿರುವ ಪಕ್ಷಕ್ಕೆ ಬೆಂಬಲ ನೀಡಬೇಡಿ. ಬಡವರಿಗಾಗಿ ಕೆಲಸ ಮಾಡದೆ ಕಾಲ ಹರಣ ಮಾಡುವ, ದೇಶದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಹೇಳಿದರು.
ನಗರದಲ್ಲಿ ಮಾತನಾಡಿ, ಬಿಜೆಪಿ ಕೋಮುವಾದಿ, ಬಡವರನ್ನು ತುಳಿಯುವ ಪಕ್ಷವಾಗಿದೆ. ಅಧಿಕಾರದ ಆಸೆಗಾಗಿ ಸರಕಾರ ಬೀಳಿಸಿದ್ದಾರೆ. ಶಾಸಕರನ್ನು ದುಡ್ಡು ಕೊಟ್ಟು ಕೊಂಡುಕೊಂಡಿದ್ದಾರೆ. ಹಣದಾಸೆಗೆ ರಾಜೀನಾಮೆ ನೀಡಿದವರಿಗೆ ಮತ ಹಾಕಬೇಡಿ ಎಂದು ತಿಳಿಸಿದರು.