ಬಳ್ಳಾರಿ: ಗಣಿ ನಗರಿ ಬಳ್ಳಾರಿಯ ಆರೋಗ್ಯ ಸಂಜೀವಿನಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಯಲ್ಲಿ ಸೋಂಕಿತರ ಹಾಗೂ ಸಾಮಾನ್ಯ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಬೆಡ್‌ಗಳ ಕೊರತೆ ಮುಂದುವರೆದಿದೆ.
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಲಭ್ಯವಿರುವ ಬೆಡ್ಗಳೆಲ್ಲವೂ ಫುಲ್ ಆಗಿರೋ ಪರಿಣಾಮ ಕೋವಿಡ್ ಸೋಂಕಿಗೆ ಒಳಗಾದ ಹಾಗೂ ಸಾಮಾನ್ಯ ಕಾಯಿಲೆಯಿಂದ ಬಳಲುತ್ತಿರೋ ರೋಗಿಗಳಿಗೆ ಬೆಡ್ಗಳೇ ಸಿಗುತ್ತಿಲ್ಲ. ಬೆಡ್‌ಗಳ ಕೊರತೆ ಉಂಟಾದ ಹಿನ್ನೆಲೆ ನೆಲದ ಮೇಲೆ ಬೆಡ್ ಹಾಕಲಾಗಿದೆ. ಒಂದೇ ಬೆಡ್ ಮೇಲೆ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೊರಗಡೆ ಆ್ಯಂಬುಲೆನ್ಸ್ನಲ್ಲೇ ಆಕ್ಸಿಜನ್ ಹಾಕಿ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಿರೋದು ಕೂಡ ಕಂಡುಬಂದಿದೆ.