ಹೊಸಪೇಟೆ:ಕೊರೊನಾ ವೈರಸ್ ಭೀತಿಯಿಂದ ತಾಲೂಕಿನ ತಿಮ್ಮಲಾಪುರದ ಗ್ರಾಮದ ಜನರು ರಾಷ್ಟ್ರೀಯ ಹೆದ್ದಾರಿಯಿಂದ ವಿವಿಧ ರಸ್ತೆಯನ್ನು ಕಲ್ಪಿಸುವ ರಸ್ತೆಗಳಿಗೆ ಮುಳ್ಳಿನ ಬೇಲಿ ಹಾಕಿದ್ದಾರೆ.
ಕೊರೊನಾ ಭೀತಿ: ರಸ್ತೆಗಳಲ್ಲಿ ಮುಳ್ಳಿನ ಬೇಲಿ ಹಾಕಿದ ಗ್ರಾಮಸ್ಥರು - barbed wire fence on the roads
ಹೊಸಪೇಟೆ ತಿಮ್ಮಲಾಪುರದ ಗ್ರಾಮದ ಜನರು ರಾಷ್ಟ್ರೀಯ ಹೆದ್ದಾರಿಯಿಂದ ವಿವಿಧ ರಸ್ತೆಯನ್ನು ಕಲ್ಪಿಸುವ ರಸ್ತೆಗಳಿಗೆ ಮುಳ್ಳಿನ ಬೇಲಿ ಹಾಕಿದ್ದಾರೆ.
ಕೊರೊನಾ ವೈರಸ್ ತಡೆಗಟ್ಟಲು ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡಿದೆ. ಆದರೆ ಜನರು ಇದನ್ನು ಲೆಕ್ಕಿಸದೆ ಸಂಚಾರ ಮಾಡುತ್ತಿದ್ದಾರೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸಿದರೂ ನಿರ್ಲಕ್ಷಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ತಮ್ಮ ಕುಟುಂಬ ಬಿಟ್ಟು ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ. ಹಾಗಾಗಿ ಜನರು ಸಹಕಾರ ನೀಡಬೇಕಿದೆ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಜನರು ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸಿಬೇಕಿದೆ. ಮುಖಕ್ಕೆ ಕರವಸ್ತ್ರ ಅಥವಾ ಮಾಸ್ಕ್ ಧರಿಸಬೇಕು. ಮುಖ ಮತ್ತು ಕಣ್ಣಗಳನ್ನು ಮುಟ್ಟಿಕೊಳ್ಳದೆ ಕೈಗಳನ್ನು ಸಾಬೂನಿನ ಮೂಲಕ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಆದರೆ ಜನರು ಇದನ್ನು ಗಣನೆಗೆ ತೆಗದುಕೊಳ್ಳದೆ ಓಡಾಡುತ್ತಿದ್ದಾರೆ. ಅದಕ್ಕಾಗಿ ನಮ್ಮೂರಿನ ಗ್ರಾಮಕ್ಕೆ ಬೇರೆ ಯಾವುದೇ ಗ್ರಾಮದ ಜನರು ಬರಬಾರದು ಹಾಗೂ ನಮ್ಮೂರಿನ ಜರನು ಬೇರೆ ಗ್ರಾಮಕ್ಕೆ ತೆರಳಬಾರದು ಎಂದು ಎಲ್ಲಾ ರಸ್ತೆಗಳಿಗೆ ಮುಳ್ಳಿನ ಬೇಲಿಯನ್ನು ಹಾಕಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.