ಬಳ್ಳಾರಿ:ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆಯುತ್ತಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮತದಾನ ಆರಂಭವಾಗಿದೆ. ರಾಹುಲ್ ಗಾಂಧಿ ಜೊತೆ ಡಿ.ಕೆ ಸುರೇಶ್, ನಾಗೇಂದ್ರ ಮತ್ತು ಕೆಪಿಸಿಸಿ ಕಾರ್ಯದರ್ಶಿ ಮತದಾನ ಮಾಡಿದ್ದಾರೆ.
ಮತದಾನ ಬಳಿಕ ರಾಹುಲ್ ಗಾಂಧಿ ಬಳಗ ಕೌಲ ಬಜಾರ ವ್ಯಾಪ್ತಿಯ ಇರ್ಷಾದ್ ಅಲಿ ದರ್ಗಾಕ್ಕೆ ಹೋಗಿ ಬಂದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆಯುತ್ತಿದ್ದರಿಂದ ಭಾರತ್ ಜೋಡೋ ಯಾತ್ರೆಗೆ ತಾತ್ಕಾಲಿಕವಾಗಿ ವಿರಾಮ ನೀಡಲಾಗಿದೆ.
ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ಬಳಿ ಇಂದು ಮತ್ತು ನಾಳೆ ವಾಸ್ತವ್ಯ ಹೂಡಿರುವ ರಾಹುಲ್ ಗಾಂಧಿ, ಎಐಸಿಸಿ ಹಾಗೂ ಕೆಪಿಸಿಸಿಯ ಸುಮಾರು 45 ಸದಸ್ಯರು ಅಲ್ಲೇ ಮತದಾನ ಹಕ್ಕು ಚಲಾಯಿಸಲಿದ್ದಾರೆ. ಪಾದಯಾತ್ರೆಗೆ ಬಳಸುವ ರೂಮ್ ಕಂಟೇನರ್ ಅನ್ನು ಮತಗಟ್ಟೆಯಾಗಿ ಬದಲಾಯಿಸಿದ್ದು, ರಾಹುಲ್ ಗಾಂಧಿ ಸೇರಿ 45 ಸದಸ್ಯರು ಇಲ್ಲಿಂದಲೇ ಹಕ್ಕು ಚಲಾಯಿಸಲಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಕಣದಲ್ಲಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪೈಪೊಟಿ ನಡೆಸುತ್ತಿದ್ದಾರೆ.
ಓದಿ:ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಬಳ್ಳಾರಿಯಿಂದಲೇ ಮತ ಚಲಾಯಿಸಲಿರುವ ರಾಹುಲ್ ಗಾಂಧಿ