ಬಳ್ಳಾರಿ:ಕೊರೊನಾ ಸೋಂಕು ಲಕ್ಷಾಂತರ ಕುಟುಂಬಗಳ ಸಂತೋಷವನ್ನೇ ಕಸಿದುಕೊಂಡಿದೆ. ಅದರಲ್ಲೂ ಪೋಷಕರನ್ನು ಕಳೆದುಕೊಂಡ ಮಕ್ಕಳು ಈಗ ಅನಾಥರಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಅಂದಾಜು 180 ಮಕ್ಕಳು ಸಿಂಗಲ್ ಪೇರೆಂಟ್ ಹೊಂದಿದ್ದಾರೆ. ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ತಂದೆ ಅಥವಾ ತಾಯಿ ಕೋವಿಡ್ಗೆ ಬಲಿಯಾದ ಕಾರಣ ಸುಮಾರು 180 ಮಕ್ಕಳು, ಯುವಜನರು ಅನಾಥರಾಗಿದ್ದಾರೆ.
ಕೋವಿಡ್ಗೆ ಬಲಿಯಾದ ಪೋಷಕರು.. ಸಿಂಗಲ್ ಪೇರೆಂಟ್ಸ್ ಮಕ್ಕಳ ನೆರವಿಗೆ ನಿಂತ ಇಲಾಖೆ - ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣ
ಕೊರೊನಾ ಸೋಂಕಿನಿಂದ ತಂದೆ ಅಥವಾ ತಾಯಿ ಮೃತಪಟ್ಟು ಸಿಂಗಲ್ ಪೇರೆಂಟ್ ಹೊಂದಿರುವ ಅನಾಥರ ನೆರವಿಗೆ ಇಲಾಖೆ ಮುಂದಾಗಿದೆ. ಅವರಿಗೆ ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಗಳ ಸೌಲಭ್ಯ ಒದಗಿಸಲು ಇಲಾಖೆ ನಿರ್ಧರಿಸಿದೆ.

ಇಂತಹ ಸಿಂಗಲ್ ಪೇರೆಂಟ್ ಮಕ್ಕಳ ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶ್ರಮಿಸುತ್ತಿದೆ. ಈಗಾಗಲೇ 180 ಮಂದಿಯನ್ನು ಗುರುತಿಸಿರುವ ಇಲಾಖೆ. ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನಗೆಳ ಸೌಲಭ್ಯ ಒದಗಿಸಿಕೊಡಲು ಮುಂದಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಯು.ನಾಗರಾಜ, ಕೊರೊನಾ ಸೋಂಕಿನಿಂದ ತಂದೆ ಅಥವಾ ತಾಯಿ ಮೃತಪಟ್ಟು ಸಿಂಗಲ್ ಪೇರೆಂಟ್ ಹೊಂದಿರುವ ಅನಾಥರ ನೆರವಿಗೆ ಇಲಾಖೆ ಮುಂದಾಗಿದೆ. ಅವರಿಗೆ ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಗಳ ಸೌಲಭ್ಯ ಒದಗಿಸಲು ಕೊಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.