ಕರ್ನಾಟಕ

karnataka

ETV Bharat / state

ಕಬ್ಬಿಣದ ಹಾರೆಯಿಂದ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಕ್ರೂರಿ ಪತಿ - ತೋರಣಗಲ್ಲು ಪೊಲೀಸ್ ಠಾಣೆ

ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಪತಿ ಕ್ರೂರತನ ಮೆರೆದ ಘಟನೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲು ಎಂಬಲ್ಲಿ ನಡೆದಿದೆ.

ಕೊಲೆಯಾದ ದುರ್ದೈವಿ ಲಕ್ಷ್ಮಿ

By

Published : Sep 18, 2019, 11:33 PM IST

ಬಳ್ಳಾರಿ: ಪತಿಯೇ ಪತ್ನಿಯ ತಲೆಗೆ ಕಬ್ಬಿಣದ ಹಾರೆಯಿಂದ ಹೊಡೆದು ಹತ್ಯೆಗೈದು ಕ್ರೂರತನ ಮೆರೆದ ಘಟನೆ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ದುರ್ದೈವಿ ಲಕ್ಷ್ಮಿ

ತೋರಣಗಲ್ಲು ಗ್ರಾಮದ ನಿವಾಸಿ ಲಕ್ಷ್ಮಿ (26) ಎಂಬುವವರು ಕೊಲೆಯಾದ ದುರ್ದೈವಿ.

ಆರೋಪಿ ಪತಿ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಕೆಲಸವಿಲ್ಲದೇ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಆರೋಪಿ ಮದ್ಯ ವ್ಯಸನಿಯಾಗಿದ್ದನು ಎಂಬ ಮಾಹಿತಿ ದೊರೆತಿದೆ.

ಈ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details