ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಈಜಲು ಹೋಗಿ ಬಾಲಕ ಸಾವು: 4 ಗಂಟೆ ಉಪ್ಪಿನಲ್ಲಿ ಶವವಿಟ್ಟು ಬದುಕಿಸಲು ಪ್ರಯತ್ನ! - ನಾಲ್ಕು ತಾಸು ಉಪ್ಪಿನಲ್ಲಿ ಹೆಣವನ್ನು ಮಲಗಿಸಿದರೂ ಬದುಕದ

ಈಜಲು ಹೋಗಿದ್ದ 10 ವರ್ಷದ ಬಾಲಕನೋರ್ವ ಮುಳುಗಿ ಮೃತಪಟ್ಟಿದ್ದಾನೆ. ಆದರೆ, ಆತನನ್ನು ಉಪ್ಪಿನಲ್ಲಿ ಮಲಗಿಸಿದರೆ ಬದುಕುತ್ತಾನೆಂಬ ನಂಬಿಕೆಯಿಂದ ಪೋಷಕರು 4 ತಾಸು ಮೃತದೇಹವನ್ನು ಉಪ್ಪಿನಲ್ಲಿ ಮಲಗಿಸಿದ್ದಾರೆ.

ಈಜಲು ಹೋಗಿ ಮೃತಪಟ್ಟ ಬಾಲಕ
boy-who-died-while-swimming-in-bellary

By

Published : Sep 5, 2022, 9:40 AM IST

Updated : Sep 5, 2022, 5:20 PM IST

ಬಳ್ಳಾರಿ: ಈಜಲು ಹೋದ ಬಾಲಕ ನೀರಿನ ಹೊಂಡದಲ್ಲಿ ಬಿದ್ದು ಮೃತಪಟ್ಟ ಘಟನೆ ಬಳ್ಳಾರಿ ತಾಲೂಕಿನ ಸಿರವಾರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಆದ್ರೆ, ತಮ್ಮ ಮಗನನ್ನು ಉಪ್ಪು ಹಾಕಿ ಮುಚ್ಚಿ ಮಲಗಿಸಿದರೆ ಆತ ಬದುಕಿ ಬರುತ್ತಾನೆ ಎಂಬ ಮೂಢನಂಬಿಕೆಯಿಂದ ಪೋಷಕರು ನಾಲ್ಕು ತಾಸುಗಳ ಕಾಲ ಮೃತದೇಹವನ್ನು ಉಪ್ಪಿನಲ್ಲಿಯೇ ಮಲಗಿಸಿದ್ದಾರೆ.

ವಿವರ: ಸಿರವಾರ ಗ್ರಾಮದ ಸುರೇಶ್(10) ನಿನ್ನೆ ತಮ್ಮ ಸ್ನೇಹಿತರೊಂದಿಗೆ ನೀರಿನ ಹೊಂಡದಲ್ಲಿ ಈಜಲು ಹೋಗಿದ್ದ. ಈಜು ಬಾರದೆ ನೀರಿನಲ್ಲಿ ಮುಳುಗಿ ಆತ ಮೃತಪಟ್ಟಿದ್ದಾನೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೋಷಕರು ನಾಲ್ಕೈದು ಚೀಲದಲ್ಲಿ ಉಪ್ಪು ತಂದು ಮೃತದೇಹದ ಶಿರ ಭಾಗವನ್ನು ಬಿಟ್ಟು ಉಳಿದ ದೇಹಕ್ಕೆ ಉಪ್ಪು ಸುರಿದಿದ್ದಾರೆ. ಸುಮಾರು ನಾಲ್ಕು ತಾಸು ಕಳೆದರೂ ಆತ ಬದುಕಿ ಬರಲಿಲ್ಲ. ಇದರಿಂದ ತಮ್ಮ ಮೌಢ್ಯತೆ ಅರಿತ ಪೋಷಕರು ದೇಹವನ್ನು ಕೊನೆಗೆ ಅಂತ್ಯಸಂಸ್ಕಾರ ಮಾಡಿದ್ದಾರೆ.

ಬಳ್ಳಾರಿಯಲ್ಲಿ ಈಜಲು ಹೋಗಿ ಬಾಲಕ ಸಾವು

ನೀರಿನಲ್ಲಿ ಬಿದ್ದು ಪ್ರಾಣ ಕಳೆದುಕೊಂಡವರನ್ನು ಉಪ್ಪಿನಲ್ಲಿ ಈ ರೀತಿ ಮಲಗಿಸಿದರೆ ಅವರು ಮತ್ತೆ ಮರಳಿ ಬದುಕಿ ಬರುತ್ತಾರೆ ಎಂದು ಪೋಷಕರಿಗೆ ಯಾರೋ ಮಾಹಿತಿ ನೀಡಿದ್ದರಂತೆ. ಇದನ್ನು ಮಗನ ಸಾವಿನ ಸಂದರ್ಭದದಲ್ಲಿ ನೆನಪಿಸಿಕೊಂಡಿರುವ ಅವರು ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ವಿಜಯಪುರ: ಪತಿಯಿಂದ ಪತ್ನಿಯ ಬರ್ಬರ ಕೊಲೆ

Last Updated : Sep 5, 2022, 5:20 PM IST

ABOUT THE AUTHOR

...view details