ಕರ್ನಾಟಕ

karnataka

ETV Bharat / state

ಚರ್ಮಕ್ಕೆ ಕೊಕ್ಕೆ ಸಿಕ್ಕಿಸಿಕೊಂಡು ಕ್ರೇನ್​ ಮೇಲೆ ನೇತಾಡಿದ ಭಕ್ತ... ಜಾತ್ರೆಯಲ್ಲಿ ಭಕ್ತಿಯ ಪರಾಕಾಷ್ಠೆ!

ಕಡ್ಡಿ ರಾಂಪುರದಲ್ಲಿ ವ್ಯಕ್ತಿಯೊಬ್ಬನ ಕಾಲು ಮತ್ತು ಬೆನ್ನಿನ ಹಿಂಬಾಗದಲ್ಲಿ ಕಬ್ಬಿಣದ ಕೊಕ್ಕೆಗಳನ್ನು ಚುಚ್ಚಿ ಕ್ರೇನ್​ಗೆ ನೇತು ಹಾಕಿಕೊಂಡು ಭದ್ರಕಾಳಿಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ ಮೂಲಕ ಭಕ್ತರು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.

Bhadra Kali Temple fair at kaddirampura
ಭದ್ರ ಕಾಳಿಯ ದೇವಸ್ಥಾನ

By

Published : Mar 3, 2020, 4:59 PM IST

ಹೊಸಪೇಟೆ: ಕಡ್ಡಿ ರಾಂಪುರದಲ್ಲಿ ವ್ಯಕ್ತಿಯೊಬ್ಬನ ಕಾಲು ಮತ್ತು ಬೆನ್ನಿನ ಹಿಂಬಾಗದಲ್ಲಿ ಕಬ್ಬಿಣದ ಕೊಕ್ಕೆಗಳನ್ನು ಚುಚ್ಚಿ ಕ್ರೇನ್​ಗೆ ನೇತು ಹಾಕಿಕೊಂಡು ಭದ್ರಕಾಳಿಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ ಮೂಲಕ ಭಕ್ತರು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.

ಕ್ರೇನ್​ನಲ್ಲಿ ನೇತಾಡುತ್ತಾ ಹರಕೆ ತೀರಿಸುವ ವಿಚಿತ್ರ ಜಾತ್ರೆ!

ಪ್ರತಿ ವರ್ಷವೂ ಈ ವಿಭಿನ್ನ ಆಚರಣೆ ಮಾಡಲಾಗುತ್ತಿದ್ದು, ಹಂಪಿಯ ರಸ್ತೆಯಲ್ಲಿರುವ ಗಂಗಾ ಪೂಜೆಯ ನಂತರ ವ್ಯಕ್ತಿಯ ಕೈ ಕಾಲು ಮತ್ತು ಬೆನ್ನಿನ ಹಿಂಭಾಗದ ಚರ್ಮಕ್ಕೆ ಕಬ್ಬಿಣದ ಕೊಕ್ಕೆಗಳನ್ನು ಹಾಕಿಕೊಂಡು ಕ್ರೇನ್​ಗೆ ನೇತು ಹಾಕಿ ಸುಮಾರು 2 ಕಿ.ಮೀ.ನಷ್ಟು ದೂರ ಮಹಿಳೆಯರು ಮತ್ತು ಮಕ್ಕಳು ಕುಂಭಮೇಳದ ಮೂಲಕ ಮೆರವಣಿಗೆ ಮಾಡಿಕೊಂಡು ಭದ್ರಕಾಳಿಯ ದೇವಸ್ಥಾನಕ್ಕೆ ಹೋಗುತ್ತಾರೆ.

ದೇವರಿಗೆ ಹರಿಕೆ ಹೊತ್ತವರು ತಮ್ಮ ಇಷ್ಟರ್ಥ ಸಿದ್ಧಿಗಾಗಿ ಈ ರೀತಿಯ ಹರಕೆಗಳನ್ನು ಮಾಡುತ್ತಾರೆ ಮತ್ತು ಇದರಿಂದ ತಮಗಿರುವ ಸಮಸ್ಯೆಗಳು ದೂರವಾಗುತ್ತವೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ ಎಂದು ಹೇಳುತ್ತಾರೆ ಇಲ್ಲಿನ ಭಕ್ತರು.

ಏನೇ ಆಗಲಿ ಇಂತಹ ಆಧುನಿಕ ಕಾಲದಲ್ಲೂ ಜನರು ತಮ್ಮ ದೇಹವನ್ನು ದಂಡಿಸಿಕೊಂಡು ದೇವರಿಗೆ ಹರಿಕೆ ತೀರಿಸುವುದು ಭಕ್ತಿಯೋ ಅಥವಾ ಮೂಢನಂಬಿಕೆಯೋ ತಿಳಿಯದಾಗಿದೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿ ಮಾಡಿದೆ.

ABOUT THE AUTHOR

...view details